Home Uncategorized Health Tips: ಚಳಿಗಾಲದಲ್ಲಿ ಕ್ಯಾನ್ಸರ್ ಅಪಾಯದಿಂದ ದೂರವಿರಲು ಈ ಆಹಾರಗಳನ್ನು ಸೇವಿಸಿ

Health Tips: ಚಳಿಗಾಲದಲ್ಲಿ ಕ್ಯಾನ್ಸರ್ ಅಪಾಯದಿಂದ ದೂರವಿರಲು ಈ ಆಹಾರಗಳನ್ನು ಸೇವಿಸಿ

22
0

ಇಂದಿನ ಬದಲಾದ ಜೀವನಶೈಲಿ (Lifestyle) ಯಲ್ಲಿ ಆಹಾರ ಕ್ರಮದಿಂದಾಗಿ ಆರೋಗ್ಯ (Health) ಮೇಲೆ ಸಾಕಷ್ಟು ಪರಿಣಾಮ ಉಂಟಾಗುತ್ತಿದೆ. ಇದ್ದರಿಂದಾಗಿ ಮಕ್ಕಳಿಂದ ವಯಸ್ಕರ ವರೆಗೂ ಪ್ರತಿಯೊಬ್ಬರೂ ಒಂದಲ್ಲ ಒಂದು ಚಿಕ್ಕ ಪುಟ್ಟ ಕಾಯಿಲೆಯಿಂದ ಬಳಲುತ್ತಿರುವುದು ಸಾಮಾನ್ಯವಾಗಿದೆ. ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ನಿಮ್ಮ ಆಹಾರ ಕ್ರಮ ಹಾಗೂ ಜೀವನಶೈಲಿ ಹೇಗಿದೆ ಎಂಬುದು ಮುಖ್ಯ ಕಾರಣವಾಗಿರುತ್ತದೆ. ನೀವು ಆಹಾರ ಕ್ರಮ ಹಾಗೂ ಜೀವನ ಶೈಲಿಯಲ್ಲಿ ನಿರ್ಲಕ್ಷ್ಯ ತೋರಿದರೆ ಇದು ಮಾರಣಾಂತಿಕ ರೋಗ ಹರಡಲು ಕಾರಣವಾಗಬಹುದು. ನಿಮ್ಮನ್ನು ಆರೋಗ್ಯವಾಗಿಡಲು ಕ್ಯಾನ್ಸರ್‌ನಂತಹ ಕಾಯಿಲೆಯಿಂದ ರಕ್ಷಿಸಲು ಈ ಚಳಿಗಾಲದಲ್ಲಿ ಈ ಕೆಳಗಿನ ಆಹಾರ ಕ್ರಮ ರೂಢಿಸಿಕೊಳ್ಳಿ.

ಈ ಲೇಖನದಲ್ಲಿ, ನಿಮ್ಮ ವಿವಿಧ ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ಆಹಾರದಲ್ಲಿ ಸೇರಿಸಲು ಕೆಲವು ಚಳಿಗಾಲದ ಅತ್ಯುತ್ತಮ ಸೂಪರ್‌ಫುಡ್‌ಗಳನ್ನು ಪಟ್ಟಿ ಮಾಡಲಾಗಿದೆ. ಅವುಗಳು ಈ ಕೆಳಗಿನಂತಿವೆ:

1. ಟೊಮೆಟೊ:

ಟೊಮೆಟೊಗಳು ಕ್ಯಾನ್ಸರ್ ಮತ್ತು ಹೃದಯರಕ್ತನಾಳದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಾಯಕವಾಗಿದೆ. ಆದ್ದರಿಂದ ಪ್ರತಿ ದಿನದ ಆಹಾರ ಕ್ರಮದಲ್ಲಿ ಟೊಮೆಟೊ ಸೇರಿಸಿಕೊಳ್ಳಿ ಹಾಗೂ ಕಾಯಿಲೆ ಹರಡುವಿಕೆಯಿಂದ ದೂರವಿರಿ. ಟೊಮ್ಯಾಟೊದಲ್ಲಿ ಹೆಚ್ಚಾಗಿ ಕಂಡುಬರುವ ಪ್ರಬಲವಾದ ಉತ್ಕರ್ಷಣ ನಿರೋಧಕ ಫೈಟೊಕೆಮಿಕಲ್ ಲೈಕೋಪೀನ್ ಕೆಂಪು ಬಣ್ಣಕ್ಕೆ ಕಾರಣವಾಗಿದೆ. ಹಲವಾರು ಅಧ್ಯಯನಗಳ ಪ್ರಕಾರ, ಲೈಕೋಪೀನ್-ಭರಿತ ಆಹಾರವು ನಿಮ್ಮ ದೇಹದಲ್ಲಿ ಕ್ಯಾನ್ಸರ್ ಹರಡುವ ಅಪಾಯವನ್ನು ಕಡಿಮೆ ಮಾಡುತ್ತದೆ.

2. ಅರಿಶಿನ:

ಅರಿಶಿನದಲ್ಲಿ ಕಂಡುಬರುವ ಕರ್ಕ್ಯುಮಿನ್ ಎಂಬ ಅಂಶವು ಸ್ತನ, ಜಠರಗರುಳಿನ, ಶ್ವಾಸಕೋಶ ಮತ್ತು ಚರ್ಮದ ಕ್ಯಾನ್ಸರ್‌ಗೆ ಕಾರಣವಾದ ಕ್ಯಾನ್ಸರ್ ಕೋಶಗಳನ್ನು ನಿಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಸ್ತನ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವಲ್ಲಿ ಸಹಾಯಕವಾಗಿದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

3. ಬೀನ್ಸ್:

ಬೀನ್ಸ್ ನಂತಹ ಫೈಬರ್ ಭರಿತ ಆಹಾರಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಪ್ರಯೋಗಾಲಯ ಪರೀಕ್ಷೆಗಳ ಪ್ರಕಾರ, ಬೀನ್ಸ್ ಫೀನಾಲಿಕ್ ಆಮ್ಲಗಳು ಮತ್ತು ಆಂಥೋಸಯಾನಿನ್‌ಗಳಂತಹ ಕ್ಯಾನ್ಸರ್-ತಡೆಗಟ್ಟುವ ಅಂಶವನ್ನು ಹೊಂದಿರುತ್ತದೆ.

4. ವಾಲ್‌ನಟ್ಸ್‌(ಆಕ್ರೋಟ್):

ವಾಲ್‌ನಟ್ಸ್‌ನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಟೋಕೋಫೆರಾಲ್‌ಗಳು, ಜೈವಿಕ ಸಕ್ರಿಯ ಪದಾರ್ಥಗಳು ನಿಮ್ಮ ದೇಹದಲ್ಲಿ ಗೆಡ್ಡೆಗಳು ಬೆಳೆಯದಂತೆ ಸಹಕರಿಸುತ್ತದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಜೊತೆಗೆ ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ನಿಮ್ಮ ದೇಹದಲ್ಲಿ ಸ್ತನ ಕ್ಯಾನ್ಸರ್ ಹರಡದಂತೆ ಸಹಕರಿಸುತ್ತದೆ.

ಇದನ್ನು ಓದಿ: ಇತ್ತೀಚೆಗೆ ದಡಾರ ಏಕಾಏಕಿ ಲಕ್ಷಾಂತರ ಜೀವಗಳಿಗೆ ಅಪಾಯವನ್ನುಂಟು ಮಾಡುತ್ತಿದೆ

5.ಈರುಳ್ಳಿ:

ನಿಮ್ಮ ಆಹಾರ ಕ್ರಮದಲ್ಲಿ ಈರುಳ್ಳಿಯನ್ನು ರೂಢಿಸಿಕೊಳ್ಳುವುದ್ದರಿಂದ ಶ್ವಾಸಕೋಶದಿಂದ ಬರುವ ಕ್ಯಾನ್ಸರ್ ತಡೆಯವಲ್ಲಿ ಸಹಾಯಕವಾಗಿದೆ. ನಿಮ್ಮ ಪ್ರತಿ ದಿನದ ಆಹಾರದಲ್ಲಿ ಇರುಳ್ಳಿಯನ್ನು ಸೇರಿಸಿ. ಇದು ಚಳಿಗಾಲದಲ್ಲಿ ಹರಡುವ ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

LEAVE A REPLY

Please enter your comment!
Please enter your name here