Home ಬೆಂಗಳೂರು ನಗರ ಬೆಂಗಳೂರಲ್ಲಿ 133 ವರ್ಷಗಳಲ್ಲೇ ಅಧಿಕ ಮಳೆ; ಧರೆಗುರುಳಿದ 206 ಮರಗಳು

ಬೆಂಗಳೂರಲ್ಲಿ 133 ವರ್ಷಗಳಲ್ಲೇ ಅಧಿಕ ಮಳೆ; ಧರೆಗುರುಳಿದ 206 ಮರಗಳು

12
0

ಬೆಂಗಳೂರು: ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರೆಂಬ ಮಹಾನಗರ ತತ್ತರಿಸಿದೆ. ಭಾರೀ ಮಳೆ ಗಾಳಿಯಿಂದಾಗಿ ಸುಮಾರು 206 ಮರಗಳು ಧರರೆಗುರುಳಿದ್ದು ಅವಾಂತರ ಸೃಷ್ಟಿ ಮಾಡಿದೆ. ಇದರಿಂದ ಬೆಂಗಳೂರು ನಗರ ಹಲವಾರು ಕಡೆಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಿದೆ. ಸಾರ್ವಜನಿಕರು ಕೂಡಾ ಪರದಾಡುತ್ತಿದ್ದಾರೆ. ಇನ್ನು ಬೆಂಗಳೂರಿಗ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, 38 ಸ್ಥಳಗಳ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಇನ್ನು 133 ವರ್ಷಗಳಲ್ಲೇ ಇದು ಅತ್ಯಧಿಕ ಪ್ರಮಾಣ ಮಳೆ ಎಂದು ತಿಳಿದುಬಂದಿದೆ. 1891 ಜೂನ್ ​18ರಂದು 101.6 ಮಿಲಿಮೀಟರ್​ ಮಳೆ ಸುರಿದಿದ್ದು, ನಿನ್ನೆ ಸುರಿದ ಮಳೆ ದಾಖಲೆಯನ್ನು ಹಿಂದಿಕ್ಕಿದೆ. ನಿನ್ನೆ 110 ಮಿಲಿ ಮೀಟರ್‌ನಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಗಳು ತಿಳಿಸಿದ್ದಾರೆ.

ಇನ್ನು ನಗರದ 206 ಕಡೆ ಮರಗಳು ಉರುಳಿಬಿದ್ದಿವೆ. ಕಾರುಗಳು, ಆಟೋಗಳ ಮೇಲೆ ಮರಗಳು ಉರುಳಿವೆ. ಮೆಟ್ರೋ ಟ್ರ್ಯಾಕ್‌ ಮೇಲೂ ಮರ ಉರುಳಿಬಿದ್ದಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಮರಗಳು ಬಿದ್ದಿವೆ?

ಬೊಮ್ಮನಹಳ್ಳಿ -14
ದಾಸರಹಳ್ಳಿ -7
ಬೆಂಗಳೂರು ಪೂರ್ವ -22
ಮಹದೇವಪುರ -2
RR ನಗರ -7
ದಕ್ಷಿಣ- 99
ಪಶ್ಚಿಮ – 36
ಯಲಹಂಕಾ -19

LEAVE A REPLY

Please enter your comment!
Please enter your name here