ಬೆಂಗಳೂರು:
ಜೂನ್ ತಿಂಗಳಲ್ಲಿ ಗ್ರಾಹಕರಿಗೆ ನೀಡಿರುವ ಬಿಲ್ಲಿನ ಮಾಹಿತಿಯನ್ನು ತಂತ್ರಾಂಶದಲ್ಲಿ ಸೇರ್ಪಡೆಗೊಳಿಸುವ ಕಾರ್ಯವು ಪ್ರಗತಿಯಲ್ಲಿರುವ ಕಾರಣ ಗ್ರಾಹಕರಿಗೆ ಆನ್ ಲೈನಲ್ಲಿ ಋಣಾತ್ಮಕ ಬಿಲ್ಲುಗಳು ಬಂದಿದೆ, ಇದನ್ನು ಎರಡು ದಿನಗಳ ಒಳಗಾಗಿ ಸರಿಪಡಿಸಲಾಗುವುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಗ್ರಾಹಕರಿಗೆ ನೀಡಿರುವ ಭೌತಿಕ ಬಿಲ್ಲಿನಲ್ಲಿ ಸರಿಯಾದ ಬಿಲ್ ಮೊತ್ತ ನಮೂದಾಗಿರುತ್ತದೆ, ಆ ಮೊತ್ತವನ್ನು ಆನ್ ಲೈನ್ ಪಾವತಿಯಲ್ಲಿ ನಮೂದಿಸಿ ಪಾವತಿಸಾಲು ಕೋರಲಾಗಿದೆ.
ಬಿಲ್ ಕುರಿತು ಗೊಂದಲಗಲಿದ್ದರೆ ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗದ ಸಂಬಂದಿಸಿದ ಉಪ ವಿಭಾಗಕ್ಕೆ ಬೇಟಿ ನೀಡಿ ಅಥವಾ 1912 ಗೆ ಕರೆ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಸ್ಕಾಂ ಗ್ರಾಹಕರಿಗೆ ಅವರ ಬಳಕೆಗೆ ಅನುಗುಣವಾಗಿ ಮಾತ್ರವೇ ಬಿಲ್ಲನ್ನು ನೀಡಿದ್ದು ಯಾವುದೇ ಅಧಿಕ ಶುಲ್ಕವನ್ನು ನೀಡಿರುವುದಿಲ್ಲ. ಜೂಲೈ ತಿಂಗಳಲ್ಲಿ ಯಾವುದೇ ಬಿಲ್ಲಿಂಗ್ ಸಮಸ್ಯೆಗಳು ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.