ನವ ದೆಹಲಿ: ಸುಪ್ರೀಂಕೋರ್ಟ್ ಆದೇಶದಂತೆ ಚುನಾವಣಾ ಆಯೋಗ, ಚುನಾವಣಾ ಬಾಂಡ್‍ಗಳ ದೇಣಿಗೆ ವಿವರಗಳನ್ನು ಸಲ್ಲಿಸಿದ್ದು, ಪಕ್ಷಗಳಿಗೆ ದೇಣಿಗೆ ನೀಡಿದ ಅಗ್ರ 10 ಮಂದಿ ದಾನಿಗಳು ಯಾರು ಎನ್ನುವ ಕುತೂಕಲಕಾರಿ ಅಂಶ ಇದೀಗ ಬಹಿರಂಗವಾಗಿದೆ.
2019ರ ಎಪ್ರಿಲ್ 12 ರಿಂದ 2024ರ ಫೆಬ್ರುವರಿ 15ರವರೆಗೆ ಒಟ್ಟು 22,217 ಬಾಂಡ್‍ಗಳನ್ನು ಖರೀದಿಸಲಾಗಿದೆ ಎಂದು ಎಸ್‍ಬಿಐ ಸುಪ್ರೀಂಕೋರ್ಟ್‍ಗೆ ತಿಳಿಸಿದೆ.
ಫ್ಯೂಚರ್ ಗೇಮಿಂಗ್ ಅಂಡ್ ಹೋಟೆಲ್ ಸರ್ವೀಸರ್ಸ್ ಪ್ರೈವೇಟ್ ಲಿಮಿಟೆಡ್, 1368 ಕೋಟಿಯ ಬಾಂಡ್ ಖರೀದಿಸಿ ಅಗ್ರಸ್ಥಾನದಲ್ಲಿದೆ. ಮೆಘಾ ಎಂಜಿನಿಯರಿಂಗ್ ಅಂಡ್ ಇನ್‍ಫ್ರಾಸ್ಟ್ರಕ್ಚರ್ ಲಿಮಿಟೆಡ್ (966 ಕೋಟಿ), ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ (410 ಕೋಟಿ), ವೇದಾಂತ ಲಿಮಿಟೆಡ್ (400 ಕೋಟಿ) ಹಲ್ದಿಯಾ ಎನರ್ಜಿ ಲಿಮಿಟೆಡ್ (377 ಕೋಟಿ), ಭಾರ್ತಿ ಗ್ರೂಪ್ (247 ಕೋಟಿ), ಎಸ್ಸೆಲ್ ಮೈನಿಂಗ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್ (224 ಕೋಟಿ) ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‍ಮಿಷನ್ ಕಂಪನಿ (220 ಕೋಟಿ) ಕೆವೆಂಟರ್ ಫುಡ್‍ಪಾರ್ಕ್ ಇನ್‍ಫ್ರಾ ಲಿಮಿಟೆಡ್ (195 ಕೋಟಿ) ಮತ್ತು ಮದನ್‍ಲಾಲ್ ಲಿಮಿಟೆಡ್ (185) ಕೋಟಿ ಅಗ್ರ 10 ದಾನಿಗಳು.