Home Uncategorized High Court; ಗೌರ್ಮೆಂಟ್ ನೌಕರನ ವಿರುದ್ಧ ಸಂಶಯವಿದ್ದಲ್ಲಿ ಇಡೀ ವ್ಯವಸ್ಥೆಯ ಕಳಂಕಕ್ಕೆ ಕಾರಣ – ಹೈಕೋರ್ಟ್

High Court; ಗೌರ್ಮೆಂಟ್ ನೌಕರನ ವಿರುದ್ಧ ಸಂಶಯವಿದ್ದಲ್ಲಿ ಇಡೀ ವ್ಯವಸ್ಥೆಯ ಕಳಂಕಕ್ಕೆ ಕಾರಣ – ಹೈಕೋರ್ಟ್

20
0

ಬೆಂಗಳೂರು;- ಸರ್ಕಾರಿ ನೌಕರನ ವಿರುದ್ಧ ಅನುಮಾನವಿದ್ದಲ್ಲಿ ಇಡೀ ವ್ಯವಸ್ಥೆಯ ಕಳಂಕಕ್ಕೆ ಕಾರಣವಾಗಲಿದೆ ಎಂದು ಬೆಂಗಳೂರಿನ ಹೈಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಎನ್.ಎಸ್.ಸಂಜಯ್‌ಗೌಡ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ಪಟ್ಟಿದೆ. ಅಲ್ಲದೆ, ಸಾರ್ವಜನಿಕ ಸೇವಕರ ವಿರುದ್ಧ ತನಿಖಾಧಿಕಾರಿಯಿಂದ ವಿಚಾರಣೆ ನಡೆಸಿದಲ್ಲಿ ಅಂತಹ ಸಂಶಯವನ್ನು ತೊಡೆದು ಹಾಕಲು ನೆರವಾಗುತ್ತದೆ. ಜತೆಗೆ, ಅಂತಹ ಸಂಸ್ಥೆಯ ವಿರುದ್ಧ ಕೆಟ್ಟ ಅನುಮಾನವನ್ನು ಅಳಿಸಿ ಹಾಕಿದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಸೆಕ್ಷನ್ 17 ಎ ಸರ್ಕಾರಿ ಅಧಿಕಾರಿಗಳನ್ನು ತನಿಖಾಧಿಕಾರಿಗಳು ವಿನಾಕಾರಣ ವಿಚಾರಣೆಗೆ ಒಳಪಡಿಸುವುದನ್ನು ತಡೆಯುವ ಒಂದು ಅಸ್ತ್ರವಾಗಿದೆ. ಅಧಿಕಾರಿಗಳ ವಿರುದ್ಧ ಆರೋಪ ಎದುರಾದಲ್ಲಿ ಈ ಕಾಯಿದೆಯಡಿ ಅನುಮತಿ ಕಡ್ಡಾಯವಾಗಿದೆ. ಆದರೆ, ಸೆಕ್ಷನ್ 19ರ ಅಡಿ ಅನುಮತಿ ನೀಡಿದರೆ ತನಿಖೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ಈ ರೀತಿಯ ಅವಕಾಶ ಸಾಮಾನ್ಯ ಜನತೆಗೆ ಇರುವುದಿಲ್ಲ. ಆದರೆ, ಅರ್ಜಿದಾರರ ವಿರುದ್ಧದ ಆರೋಪದ ಕುರಿತು ಸತ್ಯಾಸತ್ಯತೆ ತಿಳಿಯುವುದಕ್ಕೆ ಮಾತ್ರ ಅನುಮತಿ ನೀಡಲಾಗಿದೆ.

ಅಲ್ಲದೇ, ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಇನ್ನೂ ವಿಚಾರಣೆ ಮಾಡಬೇಕಾಗಿದೆ. ಅದಕ್ಕೂ ಮುನ್ನ ಅವರ ವಿರುದ್ಧ ದೋಷಾರೋಪ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಬಗ್ಗೆ ಸರ್ಕಾರ ತೀರ್ಮಾನ ಮಾಡಬೇಕಾಗಿದ್ದು, ವಿಚಾರಣೆ ಮಾಡಬೇಕೇ ಬೇಡವೇ ಎನ್ನುವ ಕುರಿತು ಈ ಸಂದರ್ಭದಲ್ಲಿ ತಾರ್ಕಿಕ ಅಂತ್ಯಕ್ಕೆ ಬರಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.

The post High Court; ಗೌರ್ಮೆಂಟ್ ನೌಕರನ ವಿರುದ್ಧ ಸಂಶಯವಿದ್ದಲ್ಲಿ ಇಡೀ ವ್ಯವಸ್ಥೆಯ ಕಳಂಕಕ್ಕೆ ಕಾರಣ – ಹೈಕೋರ್ಟ್ appeared first on Ain Live News.

LEAVE A REPLY

Please enter your comment!
Please enter your name here