Home Uncategorized High Court; ನೀಟ್ ಪರೀಕ್ಷೆಗೆ ಅರ್ಹತಾ ಅಂಕ ಶೂನ್ಯಕ್ಕೆ ಇಳಿಸಿ ಆದೇಶ – ಕೇಂದ್ರಕ್ಕೆ ಹೈಕೋರ್ಟ್...

High Court; ನೀಟ್ ಪರೀಕ್ಷೆಗೆ ಅರ್ಹತಾ ಅಂಕ ಶೂನ್ಯಕ್ಕೆ ಇಳಿಸಿ ಆದೇಶ – ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್

16
0

ಬೆಂಗಳೂರು;- ನೀಟ್ ಪರೀಕ್ಷೆಗೆ ಅರ್ಹತಾ ಅಂಕ ಶೂನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯಪೀಠ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೇಂದ್ರದ ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ ಸೇರಿ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ಕಳೆದ 10 ವರ್ಷಗಳಿಂದ ನೀಟ್ – ಪಿಜಿ ಕಟ್ ಆಫ್ ಅಂಕಗಳು ಶೇ.50ರಷ್ಟಿತ್ತು. ಆದರೆ, 2023ನೇ ಸಾಲಿನ ನೀಟ್-ಪಿಜಿ ಕೌನ್ಸೆಲಿಂಗ್ ಹಾಜರಾಗಲು ಕಟ್ ಆಫ್ ಅಂಕಗಳನ್ನು ಶೂನ್ಯಕ್ಕೆ ಇಳಿಸಿ ಎಂಸಿಸಿ 2023ರ ಸೆ.20 ರಂದು ಅಧಿಸೂಚನೆ ಹೊರಡಿಸಿದೆ. ಇದರಿಂದ ನೀಟ್​ ಪಿಜಿಗೆ ಹಾಜರಾದ ಪ್ರತಿಯೊಬ್ಬ ಅಭ್ಯರ್ಥಿ ತನ್ನಿಷ್ಟದ ಪಿಜಿ ಸೀಟ್ ಪಡೆದುಕೊಳ್ಳಬಹುದು.

ಹೀಗಾದರೆ ದೇಶವು ಮಂದೆ ವೈದ್ಯರನ್ನು ಉತ್ಪಾದಿಸುವ ದಾಸ್ತಾನು ಮಳಿಗೆ ಅಥವಾ ಉಗ್ರಾಣ ಆಗಲಿದೆ. ಪಿಜಿ ಪ್ರವೇಶಕ್ಕೆ ಮೆರಿಟ್ ಮಾತ್ರ ಮಾನದಂಡವಾಗಬೇಕು ಎಂದು ಸುಪ್ರೀಂಕೋರ್ಟ್ ಹಲವು ಬಾರಿ ಹೇಳಿದೆ. ಕೌನ್ಸೆಲಿಂಗ್ ಕಟ್ ಆಫ್ ಶೂನ್ಯಕ್ಕೆ ಇಳಿಸುವುದರಿಂದ ಖಾಸಗಿ ಮೆಡಿಕಲ್ ಕಾಲೇಜುಗಳ ಲಾಬಿ ಇನ್ನಷ್ಟು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅರ್ಜಿಯಲ್ಲಿ ದೂರಲಾಗಿದೆ

The post High Court; ನೀಟ್ ಪರೀಕ್ಷೆಗೆ ಅರ್ಹತಾ ಅಂಕ ಶೂನ್ಯಕ್ಕೆ ಇಳಿಸಿ ಆದೇಶ – ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್ appeared first on Ain Live News.

LEAVE A REPLY

Please enter your comment!
Please enter your name here