Home Uncategorized High Court; ವಿದೇಶದಲ್ಲಿ ತಂದೆ, ತಾಯಿ – ಅಪ್ರಾಪ್ತ ಮಗನ ಸಂಕಷ್ಟ ನಿವಾರಿಸಿದ ಹೈಕೋರ್ಟ್

High Court; ವಿದೇಶದಲ್ಲಿ ತಂದೆ, ತಾಯಿ – ಅಪ್ರಾಪ್ತ ಮಗನ ಸಂಕಷ್ಟ ನಿವಾರಿಸಿದ ಹೈಕೋರ್ಟ್

26
0

ಬೆಂಗಳೂರು;- ಥಾಯ್ಲೆಂಡ್‌ನಲ್ಲಿ ತಂದೆ, ಜರ್ಮನಿಯಲ್ಲಿ ತಾಯಿ ಇದ್ದು, ಅಪ್ರಾಪ್ತ ಮಗನ ಸಂಕಷ್ಟವನ್ನು ಬೆಂಗಳೂರಿನ ಹೈಕೋರ್ಟ್ ನಿರಾಕರಿಸಿದೆ.

ಪತಿಯ ಬಳಿಯಲ್ಲಿದ್ದ ಮಗನನ್ನು ತನ್ನ ವಶಕ್ಕೆ ಒಪ್ಪಿಸುವಂತೆ ಕೋರಿ ಒಡಿಶಾ ಮೂಲದ ಮಹಿಳೆಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಮತ್ತು ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿದೆ. ಭಾರತದ ಕಾನೂನಿನಲ್ಲಿ ಮಗುವಿನ ಶಿಕ್ಷಣ ಸೇರಿದಂತೆ ಕ್ಷೇಮ ಮುಖ್ಯವಾಗಿದೆ. ಆ ದೃಷ್ಟಿಕೋನದಲ್ಲಿ ಬಾಲಕನ ಜೊತೆ ಚರ್ಚೆ ನಡೆಸಿದ ಬಳಿಕ, ಆತನ ಇಚ್ಚೆಯಂತೆ ಈ ನಿರ್ಧಾರ ಕೈಗೊಂಡಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ತಾಯಿಯಾದವರು ಮಗುವಿನ ರಕ್ಷಣೆಗಿಂತಲೂ ಜರ್ಮನಿಯಲ್ಲಿ ವೃತ್ತಿಜೀವನ ಮುಂದುವರೆಸುವ ಕುರಿತು ಹೆಚ್ಚು ಆಸಕ್ತಿಯನ್ನಿಟ್ಟುಕೊಂಡಿದ್ದಾರೆ. ಅಲ್ಲದೆ, ಏಕಾಂತದಲ್ಲಿ ಉಳಿಯುವುದನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ, ತಂದೆಯಾದವರು ತುಂಬಾ ಉದಾರತೆ ಹೊಂದಿದ್ದಾರೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.

The post High Court; ವಿದೇಶದಲ್ಲಿ ತಂದೆ, ತಾಯಿ – ಅಪ್ರಾಪ್ತ ಮಗನ ಸಂಕಷ್ಟ ನಿವಾರಿಸಿದ ಹೈಕೋರ್ಟ್ appeared first on Ain Live News.

LEAVE A REPLY

Please enter your comment!
Please enter your name here