ಬೆಂಗಳೂರು: ರಾಕ್‌ಲೈನ್ ಮಾಲ್‌ಗೆ ಬಿಬಿಎಂಪಿ ಹಾಕಿರುವ ಸೀಲ್ ಓಪನ್ ಮಾಡುವಂತೆ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. “ತಕ್ಷಣವೇ ಸೀಲ್ ಓಪನ್ ಮಾಡಬೇಕು. ವ್ಯಾಪಾರಕ್ಕೆ ಯಾವುದೇ ತೊಂದರೆಗಳನ್ನು ಮಾಡಬಾರದು. ತೆರಿಗೆ ಹಣದ ವಿಚಾರವಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ,” ಎಂದು ಬಿಬಿಎಂಪಿಗೆ ಕೋರ್ಟ್ ಸೂಚಿಸಿದೆ.
ರಾಕ್‌ಲೈನ್ ಮಾಲ್‌ಗೆ ಬಿಬಿಎಂಪಿ ಬೀಗ ಹಾಕಿದ್ದ ಕ್ರಮವನ್ನು ಪ್ರಶ್ನಿಸಿ ರಾಕ್‌ಲೈನ್ ಮಾಲ್ ಆಡಳಿತ ಮಂಡಳಿ ಹೈಕೋರ್ಟ್‌ಗೆ ಮನವಿ ಮಾಡಿತ್ತು. ವಿಚಾರಣೆ ನಡೆಸಿದ ನ್ಯಾ. ಸುನಿಲ್ ದತ್ ಯಾದವ್ (Justice Sunil Dutt Yadav) ಅವರ ಪೀಠವು ಈ ಆದೇಶ ಹೊರಡಿಸಿದೆ.
ಕಳೆದ ಬುಧವಾರ ಬಿಬಿಎಂಪಿ ಜಾಲಹಳ್ಳಿ ಕ್ರಾಸ್ ಬಳಿ ಇರೋ ರಾಕ್‌ಲೈನ್ ಮಾಲ್ ಸೀಜ್ ಮಾಡಲಾಗಿತ್ತು. ಸೀಜ್ ಮಾಡಿದ್ದನ್ನ ಪ್ರಶ್ನಿಸಿ ರಾಕ್‌ಲೈನ್ ಮಾಲ್ ಆಡಳಿತ ಮಂಡಳಿ ಕೋರ್ಟ್ ಮೆಟ್ಟಿಲೇರಿತ್ತು. ಇಂದು (ಸೋಮವಾರ) ಹೈಕೋರ್ಟ್ ಸೀಲ್ ತೆರವಿಗೆ ಸೂಚನೆ ನೀಡಿದೆ.