ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ, 2025 ಅನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ನೋಟಿಸ್ ಜಾರಿ ಮಾಡಿದೆ.
ಈ ಅರ್ಜಿಯನ್ನು ನಿರ್ದೇಶಕರಾದ ಟಿ.ಎಸ್. ನಾಗಾಭರಣ ಹಾಗೂ ಇತರರು ಸಲ್ಲಿಸಿದ್ದರು. ಅವರು ತಮ್ಮ ಅರ್ಜಿಯಲ್ಲಿ, ಈ ಹೊಸ ಕಾಯಿದೆಯಿಂದ ಬಿಬಿಎಂಪಿ ಚುನಾವಣೆ ಇನ್ನೂ ವಿಳಂಬವಾಗಲಿದ್ದು, ಇದರಿಂದ ಸಂವಿಧಾನ ಉಲ್ಲಂಘನೆ ಆಗುತ್ತದೆ ಎಂದು ವಾದಿಸಿದ್ದಾರೆ.
Also Read: HC Issues Notice to Karnataka Govt on PIL Challenging Greater Bengaluru Governance Act, 2025
ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಎಂ.ಬಿ. ನರಗುಂದ್, “ಈ ಕಾಯಿದೆ ಲೋಕಸಭೆ ಹಾಗೂ ವಿಧಾನಸಭೆಂತೆಯೇ ಮಹತ್ವದ ಸ್ಥಳೀಯ ಸಂಸ್ಥೆಯ ಚುನಾವಣೆಗಳ ಮೇಲೂ ಹೊಡೆತ ನೀಡುತ್ತದೆ. ಈಗಾಗಲೇ 10 ವರ್ಷಗಳಾಗಿ ಬಿಬಿಎಂಪಿಯಲ್ಲಿ ಚುನಾವಣೆ ನಡೆದಿಲ್ಲ. ಹೊಸ ಕಾಯಿದೆಯು ಈ ಪ್ರಕ್ರಿಯೆಯನ್ನು ಮತ್ತಷ್ಟು ಹಿಂದಕ್ಕೆ ತಳ್ಳಲಿದೆ,” ಎಂದು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದರು.
ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನೋಟಿಸ್ ನೀಡಿದ್ದು, ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸಲು ಸೂಚನೆ ನೀಡಿದೆ.