ಹುಬ್ಬಳ್ಳಿ;- ಜಿಲ್ಲೆಯಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಬೆಟ್ಟಿಂಗ್ ಕುಳಗಳನ್ನು ಅರೆಸ್ಟ್ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ನೆದರ್ ಲೆಂಡ್ ಕ್ರಿಕಟ್ ಮ್ಯಾಚ್ ವೇಳೆ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಲಾಗಿದ್ದು, ಅದರಲ್ಲಿ ಇಬ್ಬರು ಪರಾರಿ ಆಗಿದ್ದಾರೆ.
ಬಂಧಿತರಿಂದ 2 ಲಕ್ಷ 39 ಸಾವಿರ ಹಣ ಹಾಗೂ ವಿವಿಧ ಕಂಪನಿಯ ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಹುಬ್ಬಳ್ಳಿಯ ಡಾಕಪ್ಪ ಸರ್ಕಲ್ ನಲ್ಲಿ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಐವರು ಆರೋಪಿಗಳಲ್ಲಿ ನವೀನ್, ಮಹಮ್ಮದ್,ಪವನ್ ಬಂಧಿತರು.
ಸಂತೋಷ್ ಹಾಗೂ ಗಿರೀಶ್ ಪರಾರಿ ಆಗಿದ್ದಾರೆ. ಕ್ರಿಕೆಟ್ ಮ್ಯಾಚ್ ವೇಳೆ ಬೆಟ್ಟಿಂಗ್ ನಲ್ಲಿ ಐವರು ತೊಡಗಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಹುಬ್ಬಳ್ಳಿ ಕಮರಿಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವಕಪ್ ಆರಂಭವಾಗುತ್ತಲೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲ ಬೆಟ್ಟಿಂಗ್ ಭರಾಟೆ ಜೋರಾಗಿದೆ.
The post Hubballi Breaking; ಕ್ರಿಕೆಟ್ ಬೆಟ್ಟಿಂಗ್, ಮೂವರು ಅರೆಸ್ಟ್, ಇಬ್ಬರು ಎಸ್ಕೇಪ್ appeared first on Ain Live News.