ಹುಬ್ಬಳ್ಳಿ; ಧಾರವಾಡ ರೋಲರ್ಸ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಹುಬ್ಬಳ್ಳಿಯ ಗಾಜಿನ ಮನೆಯ ಸ್ಕೇಟಿಂಗ್ ರಿಂಕಿನಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ 9 ಜಿಲ್ಲಾಮಟ್ಟದ ಪಂದ್ಯಾವಳಿ ಹಾಗೂ ರಾಜ್ಯ ತಂಡ ಆಯ್ಕೆ ಪ್ರಕ್ರಿಯೆ ಯಲ್ಲಿ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿಯ 45 ಮಕ್ಕಳು ಭಾಗವಹಿಸಿ ಒಟ್ಟು 97 ಪದಕಗಳನ್ನು ಬಾಚಿಕೊಂಡಿದ್ದಾರೆ ಸ್ಪೀಡ್ ಕ್ವಾಡ್ ವಿಭಾಗದಲ್ಲಿ 17 ಸ್ಪೀಡ್ ಇನ್ ಲೈನಲ್ಲಿ 22 ರೋಲರ್ ಹಾಕಿ 3 ರೋಲರ್ ಡರ್ಬಿ 2 ಆರ್ಟಿಸ್ಟಿಕ್ 1 ಒಟ್ಟು 51 ಚಿನ್ನದ ಪದಕ 26 ಬೆಳ್ಳಿಯ ಪದಕ 20 ಕಂಚಿನ ಪದಕವನ್ನು ಪಡೆದಿದ್ದಾರೆ.
ನವಂಬರ್ನಲ್ಲಿ ನಡೆಯಲಿರುವ 39ನೇ ರಾಜ್ಯಮಟ್ಟದ ರೋಲರ್ಸ್ ಸ್ಕೇಟಿಂಗ್ ಚಾಂಪಿಯನ್ಶಿಪ್ ನಲ್ಲಿ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿಯ 36 ಮಕ್ಕಳು ಆಯ್ಕೆಯಾಗಿದ್ದು ಇವರೆಲ್ಲರಿಗೂ ತರಬೇತಿದಾರರಾದ ಅಕ್ಷಯ್ ಸೂರ್ಯವಂಶಿಯವರು ಹಾಗೂ ಅಂಕುಶ್ ಯಾರೇಸ್ಮಿ ಅವರು ತರಬೇತಿ ನೀಡಿದ್ದು ಹುಬ್ಬಳ್ಳಿ ರೋಲರ್ಸ್ ಸ್ಕೇಟಿಂಗ್ ಅಕಾಡೆಮಿಯ ಕ್ಲಬ್ ನ ಸದಸ್ಯರು ಹಾಗೂ ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಿದ್ದಾರೆ
The post Hubballi Breaking; ಜಿಲ್ಲಾ ಮಟ್ಟದ ಸ್ಕೇಟಿಂಗ್ ರಿಂಕಿ ಪಂದ್ಯಾವಳಿ appeared first on Ain Live News.