Home ಬೆಂಗಳೂರು ನಗರ Hubballi Encounter | ಹುಬ್ಬಳ್ಳಿ ಬಾಲಕಿ ಕೊಲೆ, ಆರೋಪಿ ಎನ್‍ಕೌಂಟರ್ ಪ್ರಕರಣ: ಸಿಐಡಿ ತನಿಖೆಗೆ ವರ್ಗಾವಣೆ

Hubballi Encounter | ಹುಬ್ಬಳ್ಳಿ ಬಾಲಕಿ ಕೊಲೆ, ಆರೋಪಿ ಎನ್‍ಕೌಂಟರ್ ಪ್ರಕರಣ: ಸಿಐಡಿ ತನಿಖೆಗೆ ವರ್ಗಾವಣೆ

7
0
Hubballi girl's murder, accused encounter case: Transferred to CID investigation

ಬೆಂಗಳೂರು : ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿ ಕೊಲೆಗೈದ ಆರೋಪದ ಮೇಲೆ ಬಿಹಾರ ಮೂಲದ ರಿತೇಶ್ ಕುಮಾರ್ ಎನ್‍ಕೌಂಟರ್ ಪ್ರಕರಣವನ್ನು ರಾಜ್ಯ ಸರಕಾರ ಮಂಗಳವಾರ ಸಿಐಡಿ ತನಿಖೆಗೆ ವರ್ಗಾಯಿಸಿ ಆದೇಶ ಹೊರಡಿಸಿದೆ.

ಸರಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿದ ಬೆನ್ನಲ್ಲೇ, ಸಿಐಡಿ ಅಧಿಕಾರಿ ವೆಂಕಟೇಶ್ ನೇತೃತ್ವದಲ್ಲಿ ಡಿವೈಎಸ್‍ಪಿ ಪುನೀತ್ ಕುಮಾರ್, ಇನ್‍ಸ್ಪೆಕ್ಟರ್ ಮಂಜನಾಥ್ ಅವರು ಮಂಗಳವಾರ, ಹುಬ್ಬಳ್ಳಿ ಪೊಲೀಸರಿಂದ ಪ್ರಾಥಮಿಕ ಮಾಹಿತಿ ಸಂಗ್ರಹಿಸಿರುವುದಾಗಿ ತಿಳಿದುಬಂದಿದೆ.

ನಂತರ ಈ ಪ್ರಕರಣಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಹಾಗೂ ದಾಖಲೆಗಳನ್ನು ಹುಬ್ಬಳ್ಳಿ ಪೊಲೀಸರಿಂದ ಸಿಐಡಿ ತಂಡ ಪಡೆದುಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here