Home ಬೆಂಗಳೂರು ನಗರ ಬೆಂಗಳೂರಿನಲ್ಲಿ 52 ಬಾರಿ ಪತ್ನಿಗೆ ಇರಿದ ಪತಿಗೆ ಜೀವಾವಧಿ ಶಿಕ್ಷೆ

ಬೆಂಗಳೂರಿನಲ್ಲಿ 52 ಬಾರಿ ಪತ್ನಿಗೆ ಇರಿದ ಪತಿಗೆ ಜೀವಾವಧಿ ಶಿಕ್ಷೆ

30
0
Husband sentenced to life imprisonment for stabbing wife 52 times in Bengaluru
Husband sentenced to life imprisonment for stabbing wife 52 times in Bengaluru

ಬೆಂಗಳೂರು:

52 ಬಾರಿ ಚಾಕುವಿನಿಂದ ಇರಿದು ಪತ್ನಿಯ ಕೊಲೆ ಮಾಡಿದ್ದ ಆರೋಪಿಗೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 2000 ರೂಪಾಯಿ ದಂಡ ವಿಧಿಸಿದೆ.

ಮೂರು ಮಕ್ಕಳ ತಾಯಿ ಶಾರದಾ (28) ಎಂಬುವವರನ್ನು ಆರೋಪಿ 2013ರಲ್ಲಿ ಇರಿದು ಹತ್ಯೆ ಮಾಡಿದ್ದ. 10 ವರ್ಷದ ಬಳಿಕ ಆರೋಪ ಸಾಬೀತಾದ ಹಿನ್ನೆಲೆ ಆತನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಶೀಲ ಶಂಕಿಸುತ್ತಿದ್ದ ಪತಿ ರಾಜೇಶ್ (40) ನಿಂದ ಶಾರದಾ ದೂರಾಗಿದ್ದರು. ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಿದ್ದರು. ಬಳಿಕ ಜೀವನಾಂಶ ಹಾಗೂ ವಿಚ್ಛೇದನಕ್ಕಾಗಿ ನ್ಯಾಯಲಯದ ಮೊರೆ ಹೋಗಿದ್ದರು. ಬಳಿಕ ನ್ಯಾಯಾಲಯವರು ವಿಚ್ಛೇದನ ನೀಡಿ, ಜೀವನಾಂಶ ನೀಡುವಂತೆ ರಾಜೇಶ್’ಗೆ ಆದೇಶಿಸಿತ್ತು. ಜೀವನಾಂಶ ನೀಡದಿದ್ದಕ್ಕೆ ರಾಜೇಶ್​ನನ್ನು ಜೈಲಿಗಟ್ಟಲಾಗಿತ್ತು.

ಜೈಲಿನಿಂದ ಬಿಡುಗಡೆಯಾದ ಆರೋಪಿ ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ. ಇದರಂತೆ ಗೌಡನಪಾಳ್ಯದ ಗಾರ್ಮೆಂಟ್ಸ್ ಫ್ಯಾಕ್ಟರಿಯಿಂದ ಶಾರದಾ ಅವರನ್ನು ಹಿಂಬಾಲಿಸಿದ್ದ ಆರೋಪಿ, ಮನೆ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದ.

ಏಪ್ರಿಲ್ 19, 2013 ರಂದು ಬೆಳಿಗ್ಗೆ 7.45 ರ ಸುಮಾರಿಗೆ ಅವರು ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ತಮ್ಮ ಅಜ್ಜಿಯ ಮನೆಗೆ ಮಕ್ಕಳು ಹೋಗಿದ್ದು, ಈ ವೇಳೆ ಶಾರದಾ ಒಬ್ಬಂಟಿಯಾಗಿರುವುದನ್ನು ಖಚಿತಪಡಿಸಿಕೊಂಡ ಆರೋಪ ಮನಗೆ ನುಗ್ಗಿದ್ದು, ಚಾಕಿವಿನಿಂದ 52 ಬಾರಿ ಇರಿದಿದ್ದಾನೆ. ಬಳಿಕ ಮಹಿಳೆಯ ಕೂಗಾಟ ಕೇಳಿದ ಸ್ಥಳೀಯರು ಬಾಗಿಲು ಒಡೆದು ಒಳಗೆ ಬಂದಿದ್ದಾರೆ. ಕೂಡಲೇ ಸಂತ್ರಸ್ತೆಯ ಸಹೋದರ ಸಹೋದರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆ ಬಳಿಕ ಶಾರದ ಅವರ ಸಹೋದರ ಕುಮಾರಸ್ವಾಮಿ ಲೇಔಟ್‌ನ ಠಾಣಾಧಿಕಾರಿ ಆರ್‌ಸಿ ಲೋಕೇಶ್ ಕುಮಾರ್ ಅವರಿಗೆ ದೂರು ಸಲ್ಲಿಸಿದ್ದು, ನಂತರ ಪೊಲೀಸರು ಆರೋಪಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here