
I don't know what Manoranjan is doing: Father Devarajegowda reacts after major security lapse in Parliament
ಮೈಸೂರು:
ಸಂಸತ್ತಿನಲ್ಲಿ ಇಂದು ನಡೆದ ದೊಡ್ಡ ಭದ್ರತಾ ವೈಫಲ್ಯದಲ್ಲಿ ಬಂಧಿತರಾದ ಇಬ್ಬರು ವ್ಯಕ್ತಿಗಳ ಪೈಕಿ ಮನೋರಂಜನ್ ಅವರ ತಂದೆ ದೇವರಾಜೇಗೌಡ ಪ್ರತಿಕ್ರಿಯಿಸಿ, ಅವನು ಏನು ಮಾಡುತ್ತಿದ್ದಾನೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಇವತ್ತಿನ ಘಟನೆ ಖಂಡಿನೀಯ, ಯಾರೇ ಮಾಡಿದರೂ ತಪ್ಪು, ಅದು ನನ್ನ ಮಗ ತಪ್ಪು ಮಾಡಿದರೂ ತಪ್ಪೇ ಎಂದು ಹೇಳಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗ ಮನೋರಂಜನ್ ಎಂಬುದು ನಿಜ. ನಾವು ಅವನಿಗೆ ವಿದ್ಯೆ, ಬುದ್ಧಿ, ವಿವೇಚನೆ ಕೊಟ್ಟು ಬಿಇ ಇಂಜಿನಿಯರ್ ಮಾಡಿದ್ದೇವೆ. ಸ್ವಾಮಿ ವಿವೇಕಾನಂದರ ಪುಸ್ತಕ ಹೆಚ್ಚಾಗಿ ಓದುತ್ತಿದ್ದ ಅವನು ಕೋಳಿ ಸಾಗಾಣಿಕೆ ಕುರಿ ಸಾಗಣಿಕೆಯ ಪ್ರಾಜೆಕ್ಟ್ ಮಾಡಿಕೊಂಡಿದ್ದನು ಎಂದು ಹೇಳಿದ್ದಾರೆ.
ಸಮಾಜದಲ್ಲಿ ಬಡವರಿಗೆ ಒಳಿತನ್ನು ಮಾಡೋ ಭಾವನೆ ಅವನಿಗೆ ಇತ್ತು. ಆದರೆ ಯಾರಿಗು ಕೆಡಕು ಮಾಡೋ ಬುದ್ಧಿ ಅವನಲ್ಲಿ ಇರಲಿಲ್ಲ. ಇಂದು ಸಂಸತ್ ಭವನದ ಮೇಲೆ ದಾಳಿ ಖಂಡನೀಯ. ಅದು ನನ್ನ ಮಗ ತಪ್ಪು ಮಾಡಿದರೂ ತಪ್ಪೇ ಎಂದು ಪ್ರತಿಕ್ರಿಯಿಸಿದ್ದಾರೆ.