Home ಬೆಂಗಳೂರು ನಗರ ದಸರಾ ಕ್ರೀಡಾಕೂಟದಲ್ಲಿ ಸೋತರೂ ನಾಯಕನಾಗಿ ಬೆಳೆದೆ: ಡಿಸಿಎಂ ಡಿ.ಕೆ.ಶಿವಕುಮಾರ್

ದಸರಾ ಕ್ರೀಡಾಕೂಟದಲ್ಲಿ ಸೋತರೂ ನಾಯಕನಾಗಿ ಬೆಳೆದೆ: ಡಿಸಿಎಂ ಡಿ.ಕೆ.ಶಿವಕುಮಾರ್

33
0
I was Defeated in Dussehra Games but I grew as a hero: DCM DK Shivakumar
I was Defeated in Dussehra Games but I grew as a hero: DCM DK Shivakumar

ಮೈಸೂರು:

ನನ್ನ 14 ನೇ ವಯಸ್ಸಿನಲ್ಲಿ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಸೋತು ಮನೆಗೆ ಹೋಗಿದ್ದೆ. ಆದರೆ ನಾಯಕನಾಗಿ ಬೆಳೆದೆ. ನೀವು ನನ್ನಂತೆ ನಾಯಕರಾಗಿ ಬೆಳೆಯಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕ್ರೀಡಾಪಟುಗಳಿಗೆ ಸ್ಪೂರ್ತಿಯ ಮಾತುಗಳನ್ನಾಡಿದರು.

ಮೈಸೂರು ದಸರಾ ಕ್ರೀಡಾಕೂಟ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು “ಜೂನಿಯರ್ ವಿಭಾಗದ ಜಾವಲಿನ್ ಎಸೆತ ಮತ್ತು 14.5 ಕಿಲೋ ಮೀಟರ್ ದೂರದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನೀವು ಕುಳಿತ ಜಾಗದಲ್ಲೇ ನಾನು ಕುಳಿತುಕೊಂಡಿದ್ದೆ. ಗ್ರಾಮೀಣ ಭಾಗದಿಂದ ಬಂದಂತಹ ನೀವೆಲ್ಲಾ ಕ್ರೀಡಾ ಕ್ಷೇತ್ರದಲ್ಲಿ ಭಾರತಕ್ಕೆ ಆಸ್ತಿಗಳಾಗಿ ಬೆಳಗಬೇಕು ಎಂದು ಹೇಳಿದರು.

ಶ್ರಮ ಪಡದೆ ಯಾವುದೂ ದಕ್ಕುವುದಿಲ್ಲ. ಶ್ರಮ ಇದ್ದ ಕಡೆ ಫಲವಿದೆ. ಗಣಪತಿಯನ್ನು ಪೂಜಿಸಿದ ತಕ್ಷಣ ವಿದ್ಯೆ ಬರುವುದಿಲ್ಲ‌, ಹಗಲು ಹೊತ್ತು ಶ್ರಮ ಪಡಬೇಕು. ಈಗ ಸ್ಪರ್ದೆ ತಾಲ್ಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಇಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿದೆ. ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ 107 ಪದಕಗಳನ್ನು ಗೆದ್ದಿದ್ದು, ಕನ್ನಡಿಗರು 11 ಪದಕಗಳನ್ನು ಗೆದ್ದಿದ್ದಾರೆ. ನೀವೆಲ್ಲಾ ಗ್ಲೋಬಲ್ ಮಟ್ಟಕ್ಕೆ ಬೆಳೆಯಬೇಕು ಎಂದು ಹುರಿದುಂಬಿಸಿದರು.

ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಮಹದೇವಪ್ಪ ಅವರ ಮನವಿ ಮೇರೆಗೆ ಬಂದು ಸಂತೋಷದಿಂದ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿದ್ದೇ‌ನೆ. ಕ್ರೀಡಾಕೂಟದ ಉದ್ಘಾಟನೆ ಮಾಡಿದ್ದು ಬಹಳ ಸಂತಸ ನೀಡಿತು ಎಂದು ಹೇಳಿದರು.

ಒಲಂಪಿಕ್ ಅಸೋಸಿಯೇಶನ್ ಅಧ್ಯಕ್ಷರಾದ ಗೋವಿಂದರಾಜು ಅವರು, ಕ್ರೀಡಾ ಸಚಿವರಾದ ನಾಗೇಂದ್ರ ಅವರು ಕ್ರೀಡಾಪಟುಗಳಿಗೆ ಉತ್ತಮವಾದ ಸಮವಸ್ತ್ರಗಳನ್ನ ನೀಡಿದ್ದಾರೆ. ನಾವುಗಳು ಒಂದು ಶೂ ತೆಗೆದುಕೊಳ್ಳಲು ಪರದಾಡುವಂತಹ ಸ್ಥಿತಿಯಿತ್ತು. ಇಂದು ನಿಮ್ಮ ಪೋಷಕರು ಬೆಂಬಲ ನೀಡಿದ ಕಾರಣಕ್ಕೆ ಇಲ್ಲಿಗೆ ಬಂದಿದ್ದೀರಿ, ಅವಕಾಶ ಕಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

LEAVE A REPLY

Please enter your comment!
Please enter your name here