ಬೆಂಗಳೂರು:
ಯಾವುದೇ ಕಾರಣಕ್ಕೂ ನಾನು ರಾಜಕೀಯಕ್ಕೆ ಹೋಗಲ್ಲ ಎಂದು ಜಯದೇವ ಆಸ್ಪತ್ರೆ (Jayadeva Hospital) ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಹೇಳಿದ್ದಾರೆ.
ಮಂಜುನಾಥ್ ಸೇವಾವಧಿ ಇದೇ ತಿಂಗಳ 31ರಂದು ಮುಕ್ತಾಯವಾಗಲಿದೆ. ಡಾ.ಸಿ.ಎನ್ ಮಂಜುನಾಥ್ ಅವರನ್ನು ಜಯದೇವ ಆಸ್ಪತ್ರೆ ನಿರ್ದೇಶಕ ಸ್ಥಾನದಲ್ಲಿ ಮುಂದುವರೆಸಲು ರಾಜ್ಯ ಸರ್ಕಾರ ಆಸಕ್ತಿ ತೋರಿಸಿಲ್ಲ. ಹೀಗಾಗಿ ಡಾ.ಸಿ.ಎನ್ ಮಂಜುನಾಥ್ ಅವರು ಜನವರಿ 31ರಂದು ನಿವೃತ್ತಿ ಪ್ರಕಟಿಸಲು ತಯಾರಿ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಾ.ಮಂಜುನಾಥ್, ಕಲಬುರಗಿ ಜಯದೇವ ಕಂಪ್ಲೀಟ್ ಮಾಡಿ ನಿವೃತ್ತಿ ಆಗಬೇಕು ಎಂದು ಇದ್ದೆ. ಆದರೆ ಇಷ್ಟರ ಒಳಗಡೆ ಈ ರೀತಿ ನಿರ್ಧಾರ ಆಗಿದೆ. ಜನಸಾಮಾನ್ಯರು, ಜನರು ನನಗೆ ಗೌರವ ಕೊಡುತ್ತಾ ಇದ್ದಾರೆ. ಗೌರವಯುತವಾಗಿ ಕಳಹಿಸಿಕೊಡುತ್ತಿದ್ದಾರೆ. ರಾಜಕೀಯಕ್ಕೆ ನಾನು ಹೋಗಲ್ಲ. ನನ್ನ ಮೊದಲ ಆಯ್ಕೆ ನನ್ನ ವೃತ್ತಿ. ಇಲ್ಲಿಂದ ಹೊರ ಹೋದ ಮೇಲೂ ನಾನು ನನ್ನ ವೃತ್ತಿಯಲ್ಲಿ ಮುಂದುವರೆಯುತ್ತೇನೆ. ರಾಜಕೀಯ ಇದೆಲ್ಲ ಗಾಳಿ ಸುದ್ದಿ ಎಂದು ಸ್ಪಷ್ಟನೆ ನೀಡಿದರು.