Home ಬೆಂಗಳೂರು ನಗರ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣ; ಎಎಸ್ಐ ಮಾಜಿ ಅಧಿಕಾರಿಗೆ ಐದು ವರ್ಷಗಳ ಕಠಿಣ ಕಾರಾಗೃಹ...

ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣ; ಎಎಸ್ಐ ಮಾಜಿ ಅಧಿಕಾರಿಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, 3.5 ಕೋಟಿ ರೂ. ದಂಡ

30
0
illegal assets; Ex-ASI officer sentenced to five years rigorous imprisonment, Rs 3.5 crore fine
illegal assets; Ex-ASI officer sentenced to five years rigorous imprisonment, Rs 3.5 crore fine

ಬೆಂಗಳೂರು:

ಮೈಸೂರಿನ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ತೋಟಗಾರಿಕಾ ಮಾಜಿ ಉಪ ಅಧೀಕ್ಷಕರಿಗೆ ಇಲ್ಲಿನ ನ್ಯಾಯಾಲಯವು ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣದಲ್ಲಿ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 3.5 ಕೋಟಿ ರೂ. ರೂಪಾಯಿ ದಂಡ ವಿಧಿಸಿದೆ.

2012ರ ಜನವರಿ 1ರಿಂದ 2019ರ ಆಗಸ್ಟ್ 14 ರವರೆಗೆ ಅಕ್ರಮವಾಗಿ ಸಂಪತ್ತು ಗಳಿಸಿದ ಆರೋಪದ ಮೇಲೆ ಆರೋಪಿ ಎಂಎಚ್ ತಂಗಳ್ ವಿರುದ್ಧ ಸಿಬಿಐ 2019ರ ಆಗಸ್ಟ್ 13ರಂದು ಪ್ರಕರಣ ದಾಖಲಿಸಿದೆ.

ಸಿಬಿಐ ವಿಶೇಷ ನ್ಯಾಯಾಧೀಶರಾದ ಇ ಚಂದ್ರಕಲಾ ಅವರು ತಂಗಳ್ ಅವರ ಪತ್ನಿಗೂ ಅವರಿಗೆ ಮೂರು ವರ್ಷಗಳ ಸಾದಾ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ ಎಂದು ಸಿಬಿಐ ಬುಧವಾರ ಹೇಳಿಕೆ ಬಿಡುಗಡೆ ಮಾಡಿದೆ.

ತಂಗಳ್ ಅವರು ಸುಮಾರು 3.12 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಆದರೆ, ಇದು ಆದಾಯದ ಮೂಲಗಳಿಗಿಂತ ಶೇ 103 ರಷ್ಟು ಹೆಚ್ಚಿದೆ.

ತನಿಖೆಯ ನಂತರ, ತಂಗಳ್ ಮತ್ತು ಅವರ ಪತ್ನಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು. ವಿಚಾರಣಾ ನ್ಯಾಯಾಲಯ ಇಬ್ಬರೂ ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ.

LEAVE A REPLY

Please enter your comment!
Please enter your name here