Home ಬೆಂಗಳೂರು ನಗರ ಪರಪಣ್ಣ ಅಗ್ರಹಾರ ಜೈಲಿನಲ್ಲಿ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಸಿಕ್ಕಿದೆ ತನಿಖಾ ಕೈದಿ 4567 ಸಂಖ್ಯೆ

ಪರಪಣ್ಣ ಅಗ್ರಹಾರ ಜೈಲಿನಲ್ಲಿ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಸಿಕ್ಕಿದೆ ತನಿಖಾ ಕೈದಿ 4567 ಸಂಖ್ಯೆ

37
0
HD Revanna

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಪಾಲಾದ ಶಾಸಕ ಎಚ್.ಡಿ. ರೇವಣ್ಣಗೆ (HD Revanna) ವಿಚಾರಣಾಧೀನ ಕೈದಿ ನಂಬರ್ 4567 ನೀಡಲಾಗಿದೆ.

ಮಹಿಳೆಯ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಎಚ್​ಡಿ ರೇವಣ್ಣಗೆ 17ನೇ ಎಸಿಎಂಎಂ ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇದರಿಂದ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಇದೀಗ ಜೈಲು ಅಧಿಕಾರಿಗಳು ರೇವಣ್ಣಗೆ ವಿಚಾರಣಾಧೀನ ಕೈದಿ ನಂಬರ್ ನೀಡಿದ್ದಾರೆ. ಜೈಲಿಗೆ ಬರುವ ಎಲ್ಲಾ ಆರೋಪಿಗಳಿಗೆ ಎಂಟ್ರಿ ನಂಬರ್ ನೀಡಲಾಗುತ್ತದೆ. ಅದರಂತೆ ರೇವಣ್ಣ ವಿಚಾರಣಾಧೀನ ಬಂಧಿ ನಂಬರ್ 4567ನೀಡಲಾಗಿದೆ.

ರೇವಣ್ಣ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದು ರಾತ್ರಿ ಕಳೆದಿದ್ದಾರೆ. ರಾಜಕಾರಣಿಯಾಗಿ, ಶಾಸಕರಾಗಿ ಐಷಾರಾಮಿ ಜೀವನ ನಡೆಸಿದ್ದ ರೇವಣ್ಣ, ಸೆಂಟ್ರಲ್ ಜೈಲಿನ ಕ್ವಾರಂಟೈನ್ ಸೆಲ್​ನಲ್ಲಿ 1 ರಾತ್ರಿ ಕಾಲ ಕಳೆದಿದ್ದಾರೆ. ರಾತ್ರಿ ನೀಡಿದ್ದ ಮುದ್ದೆ, ಚಪಾತಿ, ರೈಸ್, ಸಾಂಬಾರ್ ತಡವಾಗಿ ಸೇವಿಸಿದ್ದಾರೆ. ಇತರೆ ಕೈದಿಗಳಂತೆ ಜೈಲಿನಲ್ಲಿ ನೀಡುವ ಊಟವನ್ನೇ ಅವರು ಸೇವಿಸಿದ್ದಾರೆ. ಮನೆಯವರು ತಂದು ಕೊಟ್ಟಿರುವ ಬಟ್ಟೆಯನ್ನು ಪಡೆದಿದ್ದಾರೆ.

ರಾತ್ರಿ ತಡವಾಗಿ ಊಟ ಮಾಡಿ ಮೌನಕ್ಕೆ ಜಾರಿದ್ದಾರೆ. ರಾತ್ರಿ 1 ಗಂಟೆಯವರೆಗೆ ನಿದ್ರೆ ಮಾಡದೆ ಯೋಚಿಸುತ್ತಿದ್ದರು. ಬಳಿಕ ಜೈಲಿನ ಕೊಠಡಿಯಲ್ಲಿ ನಿದ್ರೆಗೆ ಜಾರಿದ್ದಾರೆ. ಇನ್ನು ಹೆಚ್​.ಡಿ.ರೇವಣ್ಣ ಆರೋಗ್ಯ ಸರಿ‌ ಇಲ್ಲದ ಕಾರಣ ನಿನ್ನೆ ರಾತ್ರಿ ಜೈಲಾಧಿಕಾರಿಗಳು ಅವರ ಮೇಲೆ ಹೆಚ್ಚು ನಿಗಾ ಇಟ್ಟಿದ್ದರು. ರೇವಣ್ಣ ಇದ್ದ ಕೊಠಡಿ ಬಳಿ ಓರ್ವ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಇಂದು ಬೆಳಗ್ಗೆ 5.30ಕ್ಕೆ ನಿದ್ರೆಯಿಂದ ಎದಿದ್ದಾರೆ. ಎಸ್​ಐಟಿ ಕಸ್ಟಡಿ ಅವಧಿ ಅಂತ್ಯವಾಗಿದ್ದರಿಂದ 17ನೇ ACMMಗೆ ರೇವಣ್ಣರನ್ನು ನಿನ್ನೆ ಹಾಜರು ಪಡಿಸಲಾಗಿತ್ತು. ಕೋರ್ಟ್​ಗೆ ರಿಮಾಂಡ್ ಅರ್ಜಿ ಸಲ್ಲಿಸಿದ ಎಸ್‌ಐಟಿ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ವಹಿಸುವಂತೆ ಮನವಿ ಮಾಡಿದ್ದರು. ಪ್ರಕರಣದಲ್ಲಿ ಎರಡು ಕಡೆಯ ವಾದ ಆಲಿಸಿ, ವಿಚಾರಣೆ ನಡೆಸಿದ ನ್ಯಾಯಾಧೀಶರು ಮಾರ್ಚ್ 14 ರವರೆಗೆ ಹೆಚ್.ಡಿ.ರೇವಣ್ಣರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು.

ಇದೇ ವೇಳೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿ ಹೆಚ್.ಡಿ.ರೇವಣ್ಣ ಜಾಮೀನು ಅರ್ಜಿಯ ವಿಚಾರಣೆ ಮಾಡಲಾಗಿತ್ತು. ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಕೋರ್ಟ್ ನಾಳೆಗೆ ಮುಂದೂಡಿದೆ.

LEAVE A REPLY

Please enter your comment!
Please enter your name here