ಬೆಂಗಳೂರು,: ಕರ್ಣೂಲಿನಲ್ಲಿ ನಡೆದ ಭೀಕರ ಬಸ್ ದುರಂತದ ನಂತರ ಕರ್ನಾಟಕ ಸರ್ಕಾರ ಎಚ್ಚರಗೊಂಡಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ರಾಜ್ಯದ ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ (BMTC), ವಾಯುವ್ಯ ಕರ್ನಾಟಕ ಸಾರಿಗೆ (NWKRTC) ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ (KKRTC) ಗಳ ವ್ಯವಸ್ಥಾಪಕ ನಿರ್ದೇಶಕರಿಗೆ (ಎಂಡಿಗಳಿಗೆ) ಎಲ್ಲಾ ಬಸ್ಗಳ ಸುರಕ್ಷತಾ ಕ್ರಮಗಳನ್ನು ತುರ್ತುವಾಗಿ ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ.
ಬಸ್ಗಳಲ್ಲಿ ಸುರಕ್ಷತಾ ಕ್ರಮಗಳನ್ನು ಬಲಪಡಿಸಲು ಸೂಚನೆ
ಸಚಿವರು ಬರೆದಿರುವ ಪತ್ರದಲ್ಲಿ, ಪ್ರಯಾಣಿಕರ ಲಗೇಜ್ ಜೊತೆಗೆ ವಾಣಿಜ್ಯ ಸರಕು ಸಾಗಾಟ ಮಾಡುವ ಸಂದರ್ಭಗಳಲ್ಲಿ ಸ್ಫೋಟಕ, ಸುಲಭವಾಗಿ ಉರಿಯುವ ವಸ್ತುಗಳನ್ನು ಯಾವುದೇ ಕಾರಣಕ್ಕೂ ಸಾಗಿಸಬಾರದು ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಇದರ ಜೊತೆಗೆ ಎಲ್ಲಾ ಏಸಿ ಬಸ್ಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿ ಕಿಟಕಿಯನ್ನು ಒಡೆಯಲು ಅಗತ್ಯವಾದ ಹ್ಯಾಮರ್ (ಸುತ್ತಿಗೆ) ಇರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
“ಕೆಲವರು ಬಸ್ನ ಲಗೇಜ್ ವಿಭಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಂತಹ ವಸ್ತುಗಳು ಬಸ್ನಲ್ಲಿ ಬೆಂಕಿ ಅಥವಾ ಸ್ಫೋಟಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಇದನ್ನು ತಡೆಗಟ್ಟಲು ಅಧಿಕಾರಿಗಳು ನಿಗಾವಹಿಸಬೇಕು,” ಎಂದು ಸಚಿವರು ಹೇಳಿದ್ದಾರೆ.
ಹೈದರಾಬಾದ್ ಘಟನೆಯ ಬಳಿಕ ರಾಜ್ಯದ ಎಚ್ಚರಿಕೆ
ಸಚಿವರು ಹೈದರಾಬಾದ್ನಲ್ಲಿ ನಡೆದ ಬಸ್ ಅಪಘಾತವನ್ನು ಉಲ್ಲೇಖಿಸಿ,
“ಆ ಘಟನೆ ಒಂದು ಸೈಕಲ್ ಅಡ್ಡ ಬಂದ ಕಾರಣದಿಂದ ಸಂಭವಿಸಿತು. ಪ್ರಯಾಣಿಕರು ಎಮರ್ಜೆನ್ಸಿ ಡೋರ್ ಮೂಲಕ ಹೊರಬಂದರು. ಇಂತಹ ಘಟನೆಗಳು ಕರ್ನಾಟಕದಲ್ಲಿ ಆಗದಂತೆ ಕ್ರಮ ಕೈಗೊಳ್ಳಬೇಕು,” ಎಂದು ತಿಳಿಸಿದ್ದಾರೆ.
ಬಸ್ಗಳಲ್ಲಿ ತುರ್ತು ನಿರ್ಗಮನ ದ್ವಾರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ, ಗ್ಲಾಸ್ ಒಡೆಯುವ ಉಪಕರಣಗಳಿವೆವೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕೆಂದು ಸೂಚಿಸಿದ್ದಾರೆ.
ಅನಧಿಕೃತ ಸ್ಲೀಪರ್ ಕೋಚ್ ಪರಿವರ್ತನೆಗಳ ತನಿಖೆ
ಸಚಿವರು ಅನಧಿಕೃತವಾಗಿ ಸ್ಲೀಪರ್ ಕೋಚ್ ಆಗಿ ಪರಿವರ್ತಿಸಲ್ಪಟ್ಟಿರುವ ಬಸ್ಗಳು ಹಾಗೂ ಅನುಮತಿ ಇಲ್ಲದೆ ಇತರ ರಾಜ್ಯಗಳಲ್ಲಿ ನೋಂದಣಿ ಮಾಡಿಸಿಕೊಂಡಿರುವ ವಾಹನಗಳು ಬಗ್ಗೆ ಚಿಂತನೆ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳಿಗೆ ಇಂತಹ ಎಲ್ಲಾ ಬಸ್ಗಳ ದಾಖಲೆಯನ್ನು ಪರಿಶೀಲಿಸಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.
“ಎಲ್ಲ ಬಸ್ಗಳು ಅಗ್ನಿ ಸುರಕ್ಷತಾ ಮತ್ತು ಪ್ರಯಾಣಿಕರ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿರಬೇಕು,” ಎಂದು ಸಚಿವರು ಹೇಳಿದ್ದಾರೆ.
Also Read:
