ಮೈಸೂರು:
ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ರೈ ಹಾಗೂ ಅವರ ಸಹೋದರ ಸುಬ್ರಹ್ಮಣ್ಯ ರೈ ಅವರ ಮೈಸೂರಿನ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ಮನೆಯ ಆವರಣದಲ್ಲಿರುವ ಅಲಂಕಾರಿಕ ಗಿಡದಲ್ಲಿ ನೇತು ಹಾಕಿದ್ದ ಬಾಕ್ಸ್’ನಲ್ಲಿ ರೂ.1 ಕೋಟಿ ಪತ್ತೆಯಾಗಿರುವುದನ್ನು ಕಂಡು ಶಾಕ್ ಆಗಿದ್ದಾರೆ.
What a creative way to hide cash….for a momen i thought it was a beehive ! This cash (one crore ) was found by Income Tax dept at the residence of Subramania Rai in Mysore, who is the brother of the Congress candidate from Puttur Mr Ashok Rai #KarnatakaElections2023 pic.twitter.com/PmGRGmErga
— Megha Prasad (@MeghaSPrasad) May 3, 2023
ಸುಬ್ರಹ್ಮಣ್ಯ ರೈ ಅವರ ಮೈಸೂರಿನ ಮನೆಯ ಮುಂದೆ ಅಲಂಕಾರಿಕ ಗಿಡವಿದ್ದು, ಈ ಗಿಡದಲ್ಲಿ ಮಾವಿನ ಹಣ್ಣುಗಳನ್ನು ಪ್ಯಾಕ್ ಮಾಡುವ ರೀತಿಯ ಬಾಕ್ಸ್ ಗಳನ್ನು ನೇತು ಹಾಕಲಾಗಿದೆ. ಆರಂಭದಲ್ಲಿ ಅಧಿಕಾರಿಗಳು ಇದನ್ನು ನಿರ್ಲಕ್ಷಿಸಿದ್ದರು. ಆದರೆ, ನಂತರ ಅನುಮಾನದ ಮೇಲೆ ಬಾಕ್ಸ್ ಗಳನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ ಬಾಕ್ಸ್ ನಲ್ಲಿ ರೂ.1 ಕೋಟಿ ನಗದು ಪತ್ತೆಯಾಗಿರುವುದನ್ನು ಕಂಡು ಶಾಕ್ ಆಗಿದ್ದಾರೆ. ನಂತರ ಈ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
#IncomeTax raids happening at Puttur Congress candidate Ashok Rai's brother Subramanya Rai's house in #Mysuru. IT raids happening also at Bombay Tiffany's store. #KarnatakaElections2023 pic.twitter.com/I8AjJTFE8Q
— Imran Khan (@KeypadGuerilla) May 3, 2023
ದಾಳಿ ಕುರಿತು ಅಧಿಕಾರಿಗಳು ಯಾವುದೇ ರೀತಿಯ ಮಾಹಿತಿಗಳನ್ನು ನೀಡಿಲ್ಲ. ಆದರೆ, ಮಧ್ಯಾಹ್ನದ ವರೆಗೂ ನಡೆಸಲಾದ ದಾಳಿಯಲ್ಲಿ ಭಾರೀ ಪ್ರಮಾಣದ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.