Home ರಾಜಕೀಯ ದೇಶದಲ್ಲಿ ಇಂಡಿಯಾ ಒಕ್ಕೂಟದ ಸರಕಾರ ರಚನೆ: ಡಿ.ಕೆ.ಶಿವಕುಮಾರ್ ವಿಶ್ವಾಸ

ದೇಶದಲ್ಲಿ ಇಂಡಿಯಾ ಒಕ್ಕೂಟದ ಸರಕಾರ ರಚನೆ: ಡಿ.ಕೆ.ಶಿವಕುಮಾರ್ ವಿಶ್ವಾಸ

25
0

ಬೆಂಗಳೂರು, ಮೇ 14: ದೇಶಾದ್ಯಂತ ಇಂಡಿಯಾ ಒಕ್ಕೂಟದ ಪರವಾದ ಅಲೆಯಿದೆ. ಒಳ್ಳೆಯ ವಾತಾವರಣ ಕಾಣುತ್ತಿದ್ದು, ನಮ್ಮ ಒಕ್ಕೂಟ ಸರ್ಕಾರ ರಚನೆ ಮಾಡುತ್ತದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಅವರಿಂದ ಸದಾಶಿವ ನಗರದ ನಿವಾಸದ ಬಳಿ ಮಾಧ್ಯಮದವರ ಜೊತೆ ಮಾತನಾಡುತ್ತಿದ್ದರು.

“ಮಹಾರಾಷ್ಟ್ರ ಮುಖ್ಯಮಂತ್ರಿ ಕರ್ನಾಟಕದಲ್ಲಿ ಆಪರೇಷನ್ ಕಮಲದ ಬಗ್ಗೆ ಮಾತನಾಡಿದ್ದಾರೆ. ಅವರ ಸರ್ಕಾರವೇ ಬಿದ್ದು ಹೋಗುವ ಸ್ಥಿತಿಯಲ್ಲಿದೆ. ಎಲ್ಲಾ ರಿವರ್ಸ್ ಆಗಬಹುದು ಎಂದು ಡಿಕೆಶಿ ಹೇಳಿದರು.

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದಲ್ಲಿ ಸಂತ್ರಸ್ತ ಮಹಿಳೆಯ ಆಡಿಯೋ-ವಿಡಿಯೋ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, “ಇದಕ್ಕೆ ಎಸ್ ಐಟಿ ಉತ್ತರ ನೀಡುತ್ತದೆ. ಇದರ ಬಗ್ಗೆ ನನಗೆ ಏನು ಗೊತ್ತಿಲ್ಲ. ನನ್ನ ಹೆಸರು ಬಳಸಿಕೊಂಡರೆ ಮಾಧ್ಯಮಗಳು ಹಾಕುತ್ತಾರೆ ಎಂದು ಉಪಯೋಗಿಸಿಕೊಳ್ಳುತ್ತಿದ್ದಾರೆ” ಎಂದರು.

ಹುಟ್ಟುಹಬ್ಬದ ಆಚರಣೆ ಬೇಡ

“ಚುನಾವಣೆ ಪ್ರಚಾರದ ನಿಮಿತ್ತ ನಾನು ಬೇರೆ ಹೊರ ರಾಜ್ಯಕ್ಕೆ ತೆರಳುತ್ತಿದ್ದು, ನನ್ನ ಹುಟ್ಟುಹಬ್ಬದ ಆಚರಣೆ ಬೇಡ ಎಂದು ಕಾರ್ಯಕರ್ತರು, ಮುಖಂಡರಿಗೆ ಮಾಧ್ಯಮಗಳ ಮೂಲಕ ಮನವಿ ಮಾಡಿದರು.

LEAVE A REPLY

Please enter your comment!
Please enter your name here