ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯ ಮಳೆಯಿಂದ ರದ್ದಾದ ಕಾರಣ ಸರಣಿ ವಶಪಡಿಸಿಕೊಳ್ಳುವ ಭಾರತದ (India vs New Zealand) ಕಸನು ಈಡೇರಲಿಲ್ಲ. ಹ್ಯಾಮಿಲ್ಟನ್ನಲ್ಲಿ 12.5 ಓವರ್ ಗಳ ಪಂದ್ಯ ಮಾತ್ರ ನಡೆಯಿತು. ಓವರ್ ಕಡಿತಗೊಳಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ತಂಡದಲ್ಲಿ ಬದಲಾವಣೆ ಮಾಡಿದರೂ ಉಪಯೋಗಕ್ಕೆ ಬರಲಿಲ್ಲ. ಶಿಖರ್ ಧವನ್ (Shikhar Dhawan), ಶುಭ್ಮನ್ ಗಿಲ್ ಹಾಗೂ ಸುರ್ಯಕುಮಾರ್ ಯಾದವ್ ಬಿಟ್ಟರೆ ಭಾರತದ ಮತ್ಯಾವ ಆಟಗಾರರು ಮೈದಾನಕ್ಕೆ ಇಳಿಯಲಿಲ್ಲ. ಇದೀಗ ನವೆಂಬರ್ 30 ಬುಧವಾರದಂದು ಕ್ರಿಸ್ಟ್ಚರ್ಚ್ನ ಹೇಗ್ಲೆ ಓವಲ್ ಮೈದಾನದಲ್ಲಿ ತೃತೀಯ ಏಕದಿನ ಆಯೋಜಿಸಲಾಗಿದೆ. ಈ ಪಂದ್ಯದ ಮೇಲೆ ಕಣ್ಣಿಟ್ಟಿರುವ ಟೀಮ್ ಇಂಡಿಯಾ ಪಂದ್ಯವನ್ನು ಗೆದ್ದು ಕನಿಷ್ಠ ಸರಣಿ ಸಮಬಲ ಮಾಡುವ ಯೋಜನೆಯಲ್ಲಿದೆ. ಈಗಾಗಲೇ ಕ್ರಿಸ್ಟ್ಚರ್ಚ್ಗೆ (Christchurch) ಬಂದಿಳಿದಿರುವ ಧವನ್ ಪಡೆ ಬೆಳಗ್ಗಿನಿಂದಲೇ ಅಭ್ಯಾಸ ಕೂಡ ಶುರು ಮಾಡಿದೆ.
ಮೂರನೇ ಏಕದಿನಕ್ಕೆ ನಾಯ ಶಿಖರ್ ಧವನ್ ಹಾಗೂ ಕೋಚ್ ವಿವಿಎಸ್ ಲಕ್ಷ್ಮಣ್ ತಂಡದಲ್ಲಿ ಬದಲಾವಣೆ ಮಾಡುವುದು ಅನುಮಾನ. ಪ್ಲೇಯಿಂಗ್ ಇಲೆವೆನ್ನಲ್ಲಿ ಇತರೆ ಆಟಗಾರರನ್ನು ತರಲು ಯಾವುದೇ ಅವಕಾಶ ಕೂಡ ಇಲ್ಲ. ಹೀಗಾಗಿ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಬೆಂಚ್ ಕಾಯಬೇಕಿದೆ. ಇವರ ಸ್ಥಾನದಲ್ಲಿ ಕಣಕ್ಕಿಳಿದಿದ್ದ ದೀಪಕ್ ಹೂಡ ಮೂರನೇ ಏಕದಿನದಲ್ಲೂ ಕಣಕ್ಕಿಳಿಯಲಿದ್ದಾರೆ.
Rishabh Pant: ಇಷ್ಟೆಲ್ಲಾ ಫ್ಲಾಪ್ ಆದ್ಮೇಲಾದ್ರೂ ಪಂತ್ಗೆ ಒಂದು ಸಣ್ಣ ಬ್ರೇಕ್ ನೀಡಿ: ಕ್ರಿಸ್ ಶ್ರೀಕಾಂತ್
ಭಾರತದಲ್ಲಿ ಆರನೇ ಬೌಲರ್ ಅವಶ್ಯತೆ ತುಂಬಾ ಇದೆ. ಧವನ್ ನಾಯಕನಾದರೆ, ಗಿಲ್ ಓಪನರ್, ಶ್ರೇಯಸ್ ಅಯ್ಯರ್ ಹಾಗೂ ಸೂರ್ಯಕುಮರ್ ಫಾರ್ಮ್ನಲ್ಲಿದ್ದಾರೆ. ರಿಷಭ್ ಪಂತ್ ಉಪ ನಾಯಕ. ಹೀಗೆ ತಂಡದಿಂದ ಸ್ಯಾಮ್ಸನ್ ಅವರನ್ನು ಬಿಟ್ಟರೆ ಮತ್ಯಾರನ್ನು ಹೊರಗಿಡುವ ಸ್ಥಿತಿಯಲ್ಲಿ ಮ್ಯಾನೇಜ್ಮೆಂಟ್ ಇರಲಿಲ್ಲ. ಹೀಗಾಗಿ ದ್ವಿತೀಯ ಪಂದ್ಯದಲ್ಲಿ ಬದಲಾವಣೆ ಮಾಡಿದ್ದು ತೃತೀಯ ಕದನಕ್ಕೂ ಮುಂದುವರೆಯಲಿದೆ.
ಬಾರತೀಯ ಕಾಲಮಾನದ ಪ್ರಕಾರ ಇಂಡೋ-ಕಿವೀಸ್ ಮೂರನೇ ಏಕದಿನ ಪಂದ್ಯ ಬೆಳಗ್ಗೆ 7 ಗಂಟೆಗೆ ಶುರುವಾಗಲಿದೆ. 6:30 ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಹೇಗ್ಲೆ ಓವಲ್ ಮೈದಾನದ ಪಿಚ್ ಬ್ಯಾಟರ್ ಮತ್ತು ಬೌಲರ್ ಇಬ್ಬರಿಗೂ ಸಹಾಯ ಮಾಡಲಿದೆ. ಇಲ್ಲಿ 300+ ರನ್ ಸುಲಭವಾಗಿ ಕಲೆಹಾಕಬಹುದು. ವೇಗಿಗಳು ಲೈನ್ ಮತ್ತು ಲೆಂತ್ ಅನ್ನು ಅರಿತು ಬೌಲಿಂಗ್ ಮಾಡಿದರೆ ಬ್ಯಾಟರ್ಗಳು ಪರದಾಡುವುದು ಖಚಿತ.
Vijay Hazare Trophy 2022: ಕಾವೇರಪ್ಪ ಕರಾರುವಾಕ್ ದಾಳಿ: ಸೆಮೀಸ್ಗೆ ಕರ್ನಾಟಕ
ವಿಶೇಷ ಎಂದರೆ ಭಾರತ ಈ ಮೈದಾನದಲ್ಲಿ ಇದುವರೆಗೆ ಒಂದೂ ಏಕದಿನ ಪಂದ್ಯವನ್ನು ಆಡಿಲ್ಲ. ನ್ಯೂಜಿಲೆಂಡ್ ಆಡಿದ 11 ಪಂದ್ಯಗಳ ಪೈಕಿ 10 ರಲ್ಲಿ ಜಯ ಸಾಧಿಸಿದೆ. ಹೀಗಾಗಿ ಈ ಪಂದ್ಯ ಭಾರತಕ್ಕೆ ಕಠಿಣವಾಗುವುದು ಖಚಿತ. ಈ ಪಂದ್ಯಕ್ಕೂ ಮಳೆಯ ಕಾಟ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಪಂದ್ಯದ ವೇಳೆ ಕ್ರಿಸ್ಟ್ ಚರ್ಚ್ನಲ್ಲಿ ಶೇ. 70ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮಳೆಯಿಂದಾಗಿ ಮೂರನೇ ಏಕದಿನ ಪಂದ್ಯವೂ ರದ್ದಾಗುವ ಸಾಧ್ಯತೆ ಹೆಚ್ಚಿದೆ.
ಭಾರತ ಸಂಭಾವ್ಯ ಪ್ಲೇಯಿಂಗ್ XI: ಶಿಖರ್ ಧವನ್ (ನಾಯಕ), ಶುಭ್ಮನನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ದೀಪಕ್ ಚಹರ್, ಯುಜ್ವೇಂದ್ರ ಚಹಲ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ