ಮಂಗಳೂರು:
ಮಂಗಳೂರಿನ ಕಡಲ ಪ್ರದೇಶದಲ್ಲಿ ಸಿಲುಕಿದ್ದ 10 ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ.
ಮೀನುಗಾರಿಕಾ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ದೋಣಿಯಲ್ಲಿದ್ದು ಆಳ ನೀರು ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 10 ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿರ್ಚೆಂದೂರ್ ಮುರುಗನ್ ಬೋಟ್ ನಲ್ಲಿದ್ದ 10 ಮೀನುಗಾರರು ಸೆ.20 ರಂದು ಕಡಲ ಪ್ರದೇಶದಲ್ಲಿ ಪ್ರಯಾಣ ಆರಂಭಿಸಿದ್ದರು. ಆದರೆ ಸೆ.24 ರಂದು ಇಂಜಿನ್ ಶಾಫ್ಟ್ ಸಮಸ್ಯೆಯ ಪರಿಣಾಮ 39 ನಾಟಿಕಲ್ ಮೈಲಿಗಳಷ್ಟು ದೂರದಲ್ಲಿ ಮೀನುಗಾರರು ಸಿಲುಕಿದ್ದರು.
ಅಧಿಕಾರಿಗಳ ಪ್ರಕಾರ, ಮುಂಬೈನ ಕಡಲ ರಕ್ಷಣಾ ಸಮನ್ವಯ ಕೇಂದ್ರ ಸಿಲುಕಿದ್ದ ಮೀನುಗಾರಿಕಾ ದೋಣಿಯಿಂದ ದುರಂತದ ಸಂಕೇತವನ್ನು ಸ್ವೀಕರಿಸಿ ಗುರುವಾರ ಅದನ್ನು ಕರಾವಳಿ ರಕ್ಷಣಾ ಪಡೆ ಜಿಲ್ಲಾ ಕೇಂದ್ರಕ್ಕೆ (ಕರ್ನಾಟಕ) ರವಾನಿಸಿತ್ತು.
@IndiaCoastGuard Dist. Hq (#Karnataka) successfully coordinated rescue of the stranded fishing boat "Thiruchendur Murugan" due to a broken engine shaft, off the coast of #NewMangalore on 26 Sep, at a distance of 39 NM. The boat was safely towed to the old #Mangalore port. pic.twitter.com/4a6rVnaMr8
— Indian Coast Guard (@IndiaCoastGuard) September 28, 2023
ಭಾರತೀಯ ಕೋಸ್ಟ್ ಗಾರ್ಡ್ ಪರಿಸ್ಥಿತಿಯ ತುರ್ತುಸ್ಥಿತಿಯನ್ನು ಗುರುತಿಸಿ, ತಕ್ಷಣವೇ ಕಾರ್ಯಪ್ರವೃತ್ತವಾಗಿದೆ ಮತ್ತು ಸಿಲುಕಿದ್ದ ಮೀನುಗಾರಿಕಾ ದೋಣಿಗೆ ಸಹಾಯ ಮಾಡಲು ಕೋಸ್ಟ್ ಗಾರ್ಡ್ ಹಡಗುಗಳಾದ C-448 ಮತ್ತು C-446 ಅನ್ನು ನಿಯೋಜಿಸಿತ್ತು.
ಸುಧಾರಿತ ನ್ಯಾವಿಗೇಷನ್ ಮತ್ತು ಟೋಯಿಂಗ್ ಸಾಮರ್ಥ್ಯಗಳನ್ನು ಹೊಂದಿರುವ ಈ ಹಡಗುಗಳು ಪ್ರಯಾಣದ ಉದ್ದಕ್ಕೂ “ತಿರುಚೆಂದೂರ್ ಮುರುಗನ್” ನ ಎಳೆಯುವ ಪ್ರಕ್ರಿಯೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿತ್ತು.