Home ಬೆಂಗಳೂರು ನಗರ Drink and Drive | 8,550 ವಾಹನಗಳ ಚಾಲಕರ ತಪಾಸಣೆ: 167 ಪ್ರಕರಣ ದಾಖಲು

Drink and Drive | 8,550 ವಾಹನಗಳ ಚಾಲಕರ ತಪಾಸಣೆ: 167 ಪ್ರಕರಣ ದಾಖಲು

37
0

ಬೆಂಗಳೂರು : ಮದ್ಯ ಸೇವಿಸಿ ವಾಹನ ಚಾಲನೆ ಆರೋಪ(ಡ್ರಿಂಕ್ ಆ್ಯಂಡ್ ಡ್ರೈವ್) ಪ್ರಕರಣ ಸಂಬಂಧ ಸಂಚಾರ ಪೊಲೀಸರು ಒಂದೇ ದಿನದಲ್ಲಿ 167ಪ್ರಕರಣಗಳನ್ನು ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಆ.22ರ ಗುರುವಾರ ರಾತ್ರಿ ನಗರಾದ್ಯಂತ ಒಟ್ಟು 8,550 ವಾಹನಗಳ ಚಾಲಕರನ್ನು ತಪಾಸಣೆಗೊಳಪಡಿಸಿರುವ ಸಂಚಾರಿ ಪೊಲೀಸರು ಪಾನಮತ್ತ ವಾಹನ ಚಾಲಕರ ವಿರುದ್ಧ ಒಟ್ಟು 167 ಪ್ರಕರಣಗಳನ್ನು ದಾಖಲಿಸಿ ಕ್ರಮ ಜರುಗಿಸಿರುವುದಾಗಿ ತಿಳಿಸಿದ್ದಾರೆ.

ನಗರದ ಪ್ರಮುಖ ರಸ್ತೆ ಜಂಕ್ಷನ್‍ಗಳಲ್ಲಿ ತಪಾಸಣೆ ನಡೆಸಲಾಗಿದೆ. ಅಲ್ಲದೆ, ಸಿಸಿಟಿವಿಯಲ್ಲಿ ಸೆರೆಯಾಗುವ ಜಂಕ್ಷನ್‍ಗಳಲ್ಲಿ ಪಿಎಸ್‍ಐಗಳ ನೇತೃತ್ವದ ತಂಡದಿಂದ ಕಾರ್ಯಾಚರಣೆ ಆರಂಭಿಸಲಾಗಿದ್ದು, ಪಾನಮತ್ತರಾಗಿ ವಾಹನ ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here