Home ಅಪರಾಧ ಹಂಪಿ ಸ್ಮಾರಕ ಮೇಲೆ ನೃತ್ಯದ ರೀಲ್ಸ್ ಮಾಡಿದ್ದ ಇನ್ ಸ್ಟಾಗ್ರಾಂ ಖ್ಯಾತಿಯ ದೀಪಕ್ ಗೌಡ ಬಂಧನ

ಹಂಪಿ ಸ್ಮಾರಕ ಮೇಲೆ ನೃತ್ಯದ ರೀಲ್ಸ್ ಮಾಡಿದ್ದ ಇನ್ ಸ್ಟಾಗ್ರಾಂ ಖ್ಯಾತಿಯ ದೀಪಕ್ ಗೌಡ ಬಂಧನ

63
0
Instagram fame Deepak Gowda arrested for dancing on Hampi monument

ಹೊಸಪೇಟೆ/ಬಳ್ಳಾರಿ:

ರೀಲ್ಸ್​ಗಾಗಿ ಹಂಪಿಯ 14ನೇ ಶತಮಾನದ ಸ್ಮಾರಕವನ್ನೇರಿ ನೃತ್ಯ ಮಾಡಿದ್ದ ಇನ್ ಸ್ಟಾಗ್ರಾಂ ಖ್ಯಾತಿಯ ದೀಪಕ್ ಗೌಡ ನನ್ನು ಪೊಲೀಸರು ಬಂಧಿಸಿದ್ದಾರೆ.

ಹಂಪಿಯ ಹೇಮಕೂಟ ಬೆಟ್ಟದಲ್ಲಿ ದೀಪಕ್ ಗೌಡ ಕುಣಿದು ಕುಪ್ಪಳಿಸುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 14ನೇ ಶತಮಾನದ ಪುರಾತನ ಸ್ಮಾರಕದ ಮಂಟಪಕ್ಕೆ ಹತ್ತುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಹಂಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಯುವಕನಿಗಾಗಿ ಹುಡುಕಾಟ ಆರಂಭಿಸಿದ್ದರು.

ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ನಿಯಮಗಳ ಉಲ್ಲಂಘನೆಯಡಿ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಹಾಕುವ ಮೂಲಕ ದೀಪಕ್ ಗೌಡ ಜನಪ್ರಿಯನಾಗಿದ್ದನು. ಸಾಮಾಜಿಕ ಜಾಲತಾಣಗಲ್ಲಿ ಪರಿಚಿತ ಮುಖವಾಗಿತ್ತು. ಹೀಗಾಗಿ ಆತನನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಲಿಲ್ಲ.

ದೀಪಕ್ ಗೌಡ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು ಎಂದು ಹೇಳಲಾಗುತ್ತಿದೆ.

ಹಂಪಿಯಲ್ಲಿ 2,500ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಕಲ್ಲುಗಳು, ದೇವಾಲಯಗಳು ಮತ್ತು ಶಾಸನಗಳಿವೆ ಮತ್ತು ಎಲ್ಲಾ ಪ್ರದೇಶಗಳಲ್ಲಿ ಭದ್ರತೆಯನ್ನು ನಿಯೋಜಿಸಲು ಸಾಧ್ಯವಾಗುವುದಿಲ್ಲ. ಇದನ್ನೇ ಬಳಸಿಕೊಂಡು ಯುವಕ ನಿಯಮಗಳನ್ನು ಉಲ್ಲಂಘಿಸಿ ವೀಡಿಯೋ ಮಾಡಿದ್ದೇನೆಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here