
ಬಾಗಲಕೋಟೆ: ಲಿಂಗಾಯತ ಶ್ರೀಗಳ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕನೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ಬಾಗಲಕೋಟೆ ಜಿಲ್ಲೆ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ. ವಿಜಯಪುರ ಜಿಲ್ಲೆಯ ನಂತರ ಇದೀಗ ಬಾಗಲಕೋಟೆಯಲ್ಲಿಯೂ ಇದೇ ರೀತಿಯ ನಿರ್ಬಂಧ ಜಾರಿಯಾಗಿದೆ.
ಬೀಳಗಿ ತಾಲೂಕಿನ ಕನೇರಿ ಮಠದ ಸ್ವಾಮೀಜಿಗೆ ಬಾಗಲಕೋಟೆ ಜಿಲ್ಲಾಧಿಕಾರಿಯಿಂದ ಅಧಿಕೃತ ನೋಟಿಸ್ ನೀಡಲಾಗಿದೆ. ಜಿಲ್ಲೆಯೊಳಗೆ ಪ್ರವೇಶಿಸದಂತೆ ಹಾಗೂ ಚಿಕ್ಕಾಲಗುಂಡಿಯ ಮಲ್ಲಿಕಾರ್ಜುನ ಮಠಕ್ಕೆ ಬಾರದಂತೆ ನೋಟಿಸ್ನಲ್ಲಿ ಸ್ಪಷ್ಟ ಸೂಚನೆ ನೀಡಲಾಗಿದೆ.
ಬೀಳಗಿ ತಾಲೂಕು ತಹಶೀಲ್ದಾರ್ ವಿನೋದ್ ಅವರು ಚಿಕ್ಕಾಲಗುಂಡಿ ಗ್ರಾಮದ ಮಠಕ್ಕೆ ತೆರಳಿ ನೋಟಿಸ್ ಹಸ್ತಾಂತರಿಸಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಹೇಳಿದೆ.
“ಬಾಗಲಕೋಟೆ ಜಿಲ್ಲೆಯಲ್ಲಿ ಇರಬಾರದು, ತಕ್ಷಣ ನಿಮ್ಮ ಮೂಲಸ್ಥಳಕ್ಕೆ ತೆರಳಬೇಕು,” ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.