Home Uncategorized International Cake Day 2022: ವಿಶ್ವ ಕೇಕ್ ದಿನದ ಇತಿಹಾಸ ಮತ್ತು ಮಹತ್ವ

International Cake Day 2022: ವಿಶ್ವ ಕೇಕ್ ದಿನದ ಇತಿಹಾಸ ಮತ್ತು ಮಹತ್ವ

70
0

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಮನೆಯ ವಿಶೇಷ ದಿನದ ಸಂಭ್ರಮ ಸಡಗರಗಳಲ್ಲಿ ಕೇಕ್ ಕಟಿಂಗ್ ಗೆ ಅದರದೇ ಆದ ವಿಶೇಷ ಸ್ಥಾನವನ್ನು ನೀಡಲಾಗುತ್ತಿದೆ. ಸಾಮಾನ್ಯವಾಗಿ ಕೇಕ್ ಪ್ರತಿಯೊಬ್ಬರಿಗೂ ಗೊತ್ತು. ಆದರೆ ಅಂತರಾಷ್ಟ್ರೀಯ ಕೇಕ್ ದಿನ (International Cake Day) ಯಾವಾಗ ಆಚರಿಸಲಾಗುತ್ತದೆ? ಹಾಗೂ ಈ ದಿನದ ವಿಶೇಷತೆ ಎನು? ಎಂಬುದರ ಕುರಿತು ಮಾಹಿತಿ ಇಲ್ಲಿದೆ. ಪ್ರಪಂಚದಾದ್ಯಂತದ ಪ್ರತಿ ವರ್ಷ ನವೆಂಬರ್ 26 ರಂದು ಅಂತರಾಷ್ಟ್ರೀಯ ಕೇಕ್ ದಿನವನ್ನು ಆಚರಿಸಲಾಗುತ್ತದೆ. ವಿಶೇಷ ಕೇಕ್ ತಯಾರಿಸಿ ತಿಂದು ಇತರರೊಂದಿಗೆ ಹಂಚಿ ಆನಂದಿಸುವ ದಿನವೇ ಅಂತರಾಷ್ಟ್ರೀಯ ಕೇಕ್ ದಿನ.

ಕೇಕ್ ಸೇವನೆಯನ್ನು ಹೆಚ್ಚಿಸಲು ಮತ್ತು ಹೆಚ್ಚು ಕೇಕ್ ತಯಾರಿಸಲು ಮತ್ತು ತಿನ್ನಲು ಜನರನ್ನು ಉತ್ತೇಜಿಸಲು ಇಂಟರ್ನ್ಯಾಷನಲ್ ಕೇಕ್ ಅಸೋಸಿಯೇಷನ್ನಿಂದ ಕೇಕ್ ದಿನವನ್ನು ರಚಿಸಲಾಗಿದೆ. ಕೇಕ್ ದಿನದಂದು ಆನಂದಿಸಬಹುದಾದ ವಿವಿಧ ರೀತಿಯ ಕೇಕ್ ಗಳೆಂದರ ಚಾಕೊಲೇಟ್ ಕೇಕ್, ವೆನಿಲ್ಲಾ ಕೇಕ್, ಹುಟ್ಟುಹಬ್ಬದ ಕೇಕ್, ಹಣ್ಣಿನ ಕೇಕ್, ಚೀಸ್ ಕೇಕ್, ಕ್ಯಾರೆಟ್ ಕೇಕ್ ಹೀಗೆ ಹತ್ತು ಹಲವು. ನೀವು ಯಾವ ರೀತಿಯ ಕೇಕ್ ಅನ್ನು ಆರಿಸಿಕೊಂಡರೂ, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸೇರಿ ಆನಂದಿಸಿ.

ಅಂತರಾಷ್ಟ್ರೀಯ ಕೇಕ್ ದಿನದ ಇತಿಹಾಸ:

ಇತಿಹಾಸದ ಪ್ರಕಾರ ಕೇಕ್ ದಿನವನ್ನು ಮೊದಲ ಬಾರಿಗೆ ರೋಮನ್ ಚಕ್ರವರ್ತಿ ನೀರೋ ಅವರ ಪತ್ನಿ ಪೊಪ್ಪಿಯಾ ಅವರು ತಮ್ಮ ಗಂಡನ ಜನ್ಮದಿನವನ್ನು ವಿಶೇಷವಾಗಿ ಆಚರಿಸುವ ಸಲುವಾಗಿ ಕೇಕ್ ದಿನವನ್ನು ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ. ನಂತರ ಈ ಕೇಕ್ ದಿನದ ಸಂಪ್ರದಾಯವು ಯುರೋಪಿನ ಇತರ ಭಾಗಗಳಿಗೆ ಹರಡಿತು.

ಇದಾದ ನಂತರ ವಿಶ್ವ ಕೇಕ್ ದಿನವನ್ನು ಅಮೇರಿಕಾದಲ್ಲಿ ಫೆಬ್ರವರಿ 22ರಂದು ಜಾರ್ಜ್ ವಾಷಿಂಗ್ಟನ್ ಅವರ ಜನ್ಮದಿನದಂದು ಆಚರಿಸಲಾಯಿತು. ನಂತರ ಪ್ರಪಂಚದ ಉಳಿದ ಭಾಗಗಳೊಂದಿಗೆ ಏಕರೂಪತೆಯನ್ನು ಕಾಪಾಡಿಕೊಳ್ಳಲು ನವೆಂಬರ್ 26 ರಂದು ಕೇಕ್ ದಿನವನ್ನು ಆಚರಿಸುವಂತೆ ಘೋಷಿಸಲಾಯಿತು. ಈ ಕೇಕ್ ದಿನವನ್ನು ಪ್ರಪಂಚದಾದ್ಯಂತದ ವಿವಿಧ ದೇಶಗಳಲ್ಲಿ ಸ್ನೇಹಿತರು, ಕುಟುಂಬ ಮತ್ತು ಪ್ರೀತಿಪಾತ್ರರೊಂದಿಗೆ ಆಚರಿಸಲಾಗುತ್ತದೆ.

ಇದನ್ನು ಓದಿ: ವಿಶೇಷ ದಿನದಂದು ಮನೆಯಲ್ಲಿಯೇ ಸುಲಭವಾಗಿ ತೆಂಗಿನ ಕಾಯಿಯ ಕೇಕ್ ತಯಾರಿಸಿ

ಅಂತರಾಷ್ಟ್ರೀಯ ಕೇಕ್ ದಿನವು ನಿಮ್ಮವರೊಂದಿಗೆ ಸಿಹಿ ಹಂಚಿಕೊಂಡು ಸಂಭ್ರವಿಸುವ ವಿಶೇಷ ದಿನವಾಗಿದೆ. ಆದ್ದರಿಂದ ಪ್ರತಿ ವರ್ಷ ನವೆಂಬರ್ 26 ರಂದು ನಿಮ್ಮವರೊಂದಿಗೆ ಸುಂದರ ಕ್ಷಣವನ್ನು ಆನಂದಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

LEAVE A REPLY

Please enter your comment!
Please enter your name here