
ಬೆಂಗಳೂರು: ಗ್ರಾಮೀಣ ಜೀವನದ ಶ್ರೀಮಂತ ಬದುಕನ್ನು ನಗರ ನಿವಾಸಿಗಳಿಗೂ ಪರಿಚಯಿಸಬೇಕೆಂಬ ಉದ್ದೇಶದಿಂದ ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸುಗ್ಗಿ–ಹುಗ್ಗಿ ಎಂಬ ಕಾರ್ಯಕ್ರಮ ಜನವರಿ 11 ಮತ್ತು 12 ರಂದು ಆಯೋಜಿಸಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಆಹಾರ ಪದ್ಧತಿ, ಸಂಪ್ರದಾಯ, ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿವೆ. ಸಿರಿಧಾನ್ಯ ಮತ್ತು ಸಾವಯವ ಪದಾರ್ಥಗಳು ಸೇರಿದಂತೆ ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡುವ 80ಕ್ಕೂ ಹೆಚ್ಚು ಮಳಿಗೆಗಳಿರಲಿವೆ. ಇದರ ಜೊತೆಗೆ ಖ್ಯಾತ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರ ಸಂಗೀತ ಕಾರ್ಯಕ್ರಮ ಹಾಗೂ ಸೋನು ವೇಣುಗೋಪಾಲ್ ಅವರ ಸ್ಟಾಂಡಪ್ ಕಾಮಿಡಿ ಶೋ ಏರ್ಪಡಿಸಲಾಗಿದೆ.