Home Uncategorized IPL ಮುನಿಸು ಮರೆತು ಹೊಂದಾದ ವಿರಾಟ್ ಕೊಹ್ಲಿ & ನವೀನ್

IPL ಮುನಿಸು ಮರೆತು ಹೊಂದಾದ ವಿರಾಟ್ ಕೊಹ್ಲಿ & ನವೀನ್

15
0

ಮುನಿಸು ಮರೆತು ವಿರಾಟ್ ಕೊಹ್ಲಿ – ನವೀನ್ ತಬ್ಬಿಕೊಂಡು ಖುಷಿ ಪಟ್ಟಿದ್ದಾರೆ. ಬುಧವಾರ ಪರಸ್ಪರ ಹಸ್ತಲಾಘವ ಮಾಡಿಕೊಂಡು ನಗು ಚೆಲ್ಲಿದ್ದಾರೆ. ಆ ಮೂಲಕ ಇವರಿಬ್ಬರ ನಡುವಿನ ಮುನಿಸು ಅಂತ್ಯವಾಗಿದೆ.

ಬುಧವಾರ ಭಾರತ ಹಾಗೂ ಅಫ್ಗಾನಿಸ್ತಾನದ ನಡುವಿನ ಪಂದ್ಯದಲ್ಲಿ ಇಬ್ಬರು ಆಟಗಾರರು ಹಸ್ತಲಾಘವ ಮಾಡಿ, ತಬ್ಬಿಕೊಂಡು ದ್ವೇಷವನ್ನು ಮರೆತರು. ಪಂದ್ಯದ ಬಳಿಕ ಇಬ್ಬರೂ ಆಟಗಾರರು ಸ್ನೇಹದಿಂದ ವರ್ತಿಸುವುದು ಕಂಡುಬಂತು.

ಇದೇ ವರ್ಷ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್‌ ಪಂದ್ಯದಲ್ಲಿ ಈ ಇಬ್ಬರು ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿತ್ತು. ಪಂದ್ಯದ ನಂತರವೂ ಇವರಿಬ್ಬರ ಮುನಿಸು ಪ್ರದರ್ಶನವಾಗಿತ್ತು. ಕೊನೆಗೆ ಲಖನೌ ನಾಯಕ ಕೆ.ಎಲ್‌ ರಾಹುಲ್ ರಾಹುಲ್ ಹಾಗೂ ಮೆಂಟರ್‌ ಗೌತಮ್‌ ಗಂಭೀರ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಗಂಭೀರ್‌ ಕೂಡ ಕೋಪಗೊಂಡಿದ್ದರು.

The post IPL ಮುನಿಸು ಮರೆತು ಹೊಂದಾದ ವಿರಾಟ್ ಕೊಹ್ಲಿ & ನವೀನ್ appeared first on Ain Live News.

LEAVE A REPLY

Please enter your comment!
Please enter your name here