ಬೆಂಗಳೂರು:
ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು 15 ಲಕ್ಷ ರೂ.ನಗದು, ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಆರ್.ಟಿ.ನಗರದ ಗಿಡ್ಡಪ್ಪ ಬ್ಲಾಕ್ 3ನೆ ಕ್ರಾಸ್ ದೃವ ಅರೋಹರ ಅಪಾರ್ಟ್ ಮೆಂಟ್ ನಿವಾಸಿ ಎನ್. ಕಿರಣ್ ಕುಮಾರ್ ಅಲಿಯಾಸ್ ಯಶವಂತ ಪೂಜಾರಿ (46) ಬಂಧಿತ ಆರೋಪಿ.
ಆರೋಪಿ ತನ್ನ ಮನೆಯಲ್ಲಿ ಐಪಿಎಲ್ ಪಂದ್ಯಾವಳಿ ಪ್ರಾರಂಭವಾದಾಗಿನಿಂದ ನಡೆದ ಐಪಿಎಲ್ ಪಂದ್ಯಗಳ ಮತ್ತು ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ತಂಡಗಳ ನಡುವಿನ ಪಂದ್ಯದ ಬಗ್ಗೆ ಆಪ್ , ವೆಬ್ ಸೈಟ್ ಮೂಲಕ ಬೆಟ್ಟಿಂಗ್ ರೇಶ್ಯೂವನ್ನು ನೋಡಿಕೊಂಡು, ಮೊಬೈಲ್ , ವ್ಯಾಟ್ಸಪ್ ಮೂಲಕ ಸಂಪರ್ಕಿಸಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು. ಈ ಪಂದ್ಯಗಳ ಬಗ್ಗೆ ಕಟ್ಟಿದ್ದ ಹಣವನ್ನು ಗೆದ್ದವರಿಗೆ ನೀಡುವುದು ಮತ್ತು ಸೋತವರಿಂದ ಪಡೆದುಕೊಳ್ಳುತ್ತಾರೆ ಹಣ ವಿನಿಮಯ ಮಾಡಿಕೊಳ್ಳುತ್ತಿದ್ದು, ಅಲ್ಲದೆ ಈ ವ್ಯಕ್ತಿಯು ಸಾರ್ವಜನಿಕರಿಂದ ಕ್ರಿಕೆಟ್ ಬೆಟ್ಟಿಂಗ್ ದಂಧೆಯಿಂದ ಕಾನೂನುಬಾಹಿರ, ಅಕ್ರಮವಾಗಿ ಹಣವನ್ನು ಸಂಪಾದನೆ ಮಾಡಿರುವುದಾಗಿ ಖಚಿತ ಮಾಹಿತಿ ಸಂಗ್ರಹಿಸಿ ಕೇಂದ್ರ ಅಪರಾಧ ವಿಭಾಗ –ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ.