Home Uncategorized IRCTC Stake Sell: ಐಆರ್​ಸಿಟಿಸಿ ಬಂಡವಾಳ ಮಾರಾಟ ಘೋಷಿಸಿದ ಸರ್ಕಾರ; ಷೇರು ಮೌಲ್ಯ ಕುಸಿತ

IRCTC Stake Sell: ಐಆರ್​ಸಿಟಿಸಿ ಬಂಡವಾಳ ಮಾರಾಟ ಘೋಷಿಸಿದ ಸರ್ಕಾರ; ಷೇರು ಮೌಲ್ಯ ಕುಸಿತ

44
0

ಮುಂಬೈ: ಭಾರತೀಯ ರೈಲ್ವೆ ಮತ್ತು ಕ್ಯಾಟರಿಂಗ್ ಸೇವೆ ಒದಗಿಸುವ ಐಆರ್​ಸಿಟಿಸಿ (IRCTC) ಶೇಕಡಾ 5ರಷ್ಟು ಬಂಡವಾಳವನ್ನು ‘ಆಫರ್ ಫಾರ್ ಸೇಲ್ (OFS)’ ಮೂಲಕ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಬೆನ್ನಲ್ಲೇ, ಷೇರು ಮಾರುಕಟ್ಟೆಯಲ್ಲಿ ಗುರುವಾರದ ವಹಿವಾಟಿನಲ್ಲಿ ಐಆರ್​ಸಿಟಿಸಿ ಷೇರುಗಳು ಶೇಕಡಾ 5ರಷ್ಟು ಕುಸಿತ ಕಂಡಿವೆ. ಒಟ್ಟು 4 ಕೋಟಿ ಈಕ್ವಿಟಿ ಷೇರುಗಳನ್ನು ಹೂಡಿಕೆದಾರರಿಗೆ ಮಾರಾಟ ಮಾಡಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.

ಗುರುವಾರ ಪೂರ್ವಾಹ್ನ 10.11ರ ವೇಳೆಗೆ ಐಆರ್​ಸಿಟಿಸಿ ಷೇರು ಮೌಲ್ಯ 34 ರೂ. ಕುಸಿದು 700.45 ರೂ. ಆಯಿತು. ಶೇಕಡಾ 4.66ರ ಕುಸಿತ ಕಂಡುಬಂತು. ಐಆರ್​ಸಿಟಿಸಿ ಷೇರು ದಿನ ಕನಿಷ್ಠ 696.70 ರೂ.ಗೆ ಕುಸಿಯಬಹುದು ಎನ್ನಲಾಗಿದ್ದು, ಸದ್ಯ ಕಂಪನಿಯ ಮಾರುಕಟ್ಟೆ ಮೌಲ್ಯ 56,076 ಕೋಟಿ ರೂ. ಇದೆ. ಹಿಂದಿನ ದಿನದ ವಹಿವಾಟಿನಲ್ಲಿ ಷೇರು ಮೌಲ್ಯ 734.70 ರೂ. ಇತ್ತು.

ಇದನ್ನೂ ಓದಿ: ರೈಲು ಟಿಕೆಟ್ ಕನ್​ಫರ್ಮ್ ಆಗಿಲ್ಲವೇ? ಈ ಆ್ಯಪ್​ನಲ್ಲಿ ಉಚಿತವಾಗಿ ಸಿಗುತ್ತೆ ಫ್ಲೈಟ್ ಟಿಕೆಟ್!

ಷೇರುಮಾರುಕಟ್ಟೆಗೆ ಐಆರ್​ಸಿಟಿಸಿ ತಿಳಿಸಿರುವ ಮಾಹಿತಿಯ ಪ್ರಕಾರ, ಕಂಪನಿಯ ಶೇಕಡಾ 2.5ರಷ್ಟು, ಅಂದರೆ 2 ಕೋಟಿ ಈಕ್ವಿಟಿ ಷೇರುಗಳನ್ನು ನಾನ್-ರಿಟೇಲ್​ ಹೂಡಿಕೆದಾರರಿಗೆ ಮಾರಾಟ ಮಾಡಲಾಗುತ್ತದೆ. ಉಳಿದ ಶೇಕಡಾ 2.5ರಷ್ಟನ್ನು, ಅಂದರೆ 2 ಕೋಟಿ ಈಕ್ವಿಟಿ ಷೇರುಗಳನ್ನು ರಿಟೇಲ್ ಹೂಡಿಕೆದಾರರಿಗೆ ಮಾರಾಟ ಮಾಡಲಾಗುತ್ತದೆ.

2,720 ಕೋಟಿ ರೂ. ಬಂಡವಾಳ ಸಂಗ್ರಹ ಗುರಿ

680 ರೂ. ಮುಖಬೆಲೆಯೊಂದಿಗೆ ಐಆರ್​ಸಿಟಿಸಿ ಷೇರಿನ ‘ಆಫರ್ ಫಾರ್ ಸೇಲ್’ಗೆ ಸರ್ಕಾರ ನಿರ್ಧರಿಸಿದೆ. ಇದು ಪ್ರಸ್ತುತ ಇರುವ ಮೌಲ್ಯಕ್ಕಿಂತ ಕಡಿಮೆ ಇದೆ. ಶೇಕಡಾ 5ರಷ್ಟು ಷೇರು ಮಾರಾಟ ಮಾಡುವ ಮೂಲಕ 2,720 ಕೋಟಿ ರೂ. ಬಂಡವಾಳ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ. ನಾನ್-ರಿಟೇಲ್ ಹೂಡಿಕೆದಾರರಿಗೆ ಇಂದಿನಿಂದಲೇ (ಡಿಸೆಂಬರ್ 15) ಐಆರ್​ಸಿಟಿಸಿ ಷೇರು ಖರೀದಿಗೆ ಲಭ್ಯವಾಗುತ್ತಿದೆ. ರಿಟೇಲ್ ಹೂಡಿಕೆದಾರರಿಗೆ ಡಿಸೆಂಬರ್ 16ರಿಂದ ಷೇರುಗಳು ಖರೀದಿಗೆ ಲಭ್ಯವಿವೆ ಎಂದು ಷೇರುಪೇಟೆ ಮೂಲಗಳು ತಿಳಿಸಿವೆ.

ಐಆರ್​ಸಿಟಿಸಿ ನಿವ್ವಳ ಲಾಭದಲ್ಲಿ ಭಾರೀ ಹೆಚ್ಚಳ

ಸೆಪ್ಟೆಂಬರ್​​​ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಐಆರ್​ಸಿಟಿಸಿ ನಿವ್ವಳ ಲಾಭದಲ್ಲಿ ಶೇಕಡಾ 42ರಷ್ಟು ಹೆಚ್ಚಳವಾಗಿತ್ತು. 226 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಕಾರ್ಯಾಚರಣೆಗಳಿಂದ ದೊರೆಯುವ ಆದಾಯ 806 ಕೋಟಿ ರೂ.ಗೆ ತಲುಪಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಆದಾಯ 405 ಕೋಟಿ ರೂ. ಅಷ್ಟೇ ಇತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here