Home ರಾಜಕೀಯ Is the country in the elixir of Modi’s rule?: CM Siddaramaiah questions|...

Is the country in the elixir of Modi’s rule?: CM Siddaramaiah questions| ಮೋದಿಯ ಆಡಳಿತದಲ್ಲಿ ದೇಶ ಅಮೃತ ಕಾಲದಲ್ಲಿದೆಯೋ?: ಸಿಎಂ ಸಿದ್ದರಾಮಯ್ಯ

20
0
Is the country in the elixir of Modi's rule CM Siddaramaiah questions

ಬೆಂಗಳೂರು: ‘ಹತ್ತು ವರ್ಷಗಳ ನರೇಂದ್ರ ಮೋದಿಯವರ ಅನ್ಯಾಯ ಕಾಲದ ವಿವರಗಳನ್ನು ಅಂಕಿ-ಅಂಶಗಳ ಸಹಿತ ಕರ್ನಾಟಕ ರಾಜ್ಯದ ಜನತೆಯ ಮುಂದೆ ಇಟ್ಟಿದ್ದೇನೆ. ದೇಶವಿಂದು ಅಮೃತ ಕಾಲದಲ್ಲಿ ಇದೆಯೋ? ಅನ್ಯಾಯದ ಕಾಲದಲ್ಲಿ ಇದೆಯೋ? ಎಂದು ಜನರೇ ತೀರ್ಮಾನಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah questions) ಸವಾಲು ಹಾಕಿದ್ದಾರೆ.

ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಹತ್ತು ವರ್ಷಗಳ ಬಿಜೆಪಿ ಆಡಳಿತವನ್ನು ಮೋದಿಯವರು ಮತ್ತು ಬಿಜೆಪಿಯ ನಾಯಕರು ‘ಅಮೃತ ಕಾಲ’ ಎಂದು ಬಣ್ಣಿಸುತ್ತಿದ್ದಾರೆ. ವಾಸ್ತವದಲ್ಲಿ ಇದು ಭಾರತದ ವಿನಾಶ ಕಾಲ. ಈ ಅವಧಿಯಲ್ಲಿ ದೇಶದ ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು, ಶೋಷಿತರು ಮತ್ತು ಜನಸಾಮಾನ್ಯರು ಎದುರಿಸುತ್ತಿರುವ ಕಷ್ಟ ಕಾರ್ಪಣ್ಯಗಳು ಐದರಿಂದ ಹತ್ತು ಪಟ್ಟು ಹೆಚ್ಚಾಗಿದೆ’ ಎಂದು ಹೇಳಿದ್ದಾರೆ.

‘ಹತ್ತು ವರ್ಷಗಳ ಹಿಂದೆ ಮೋದಿ ಈ ದೇಶದ ಮತದಾರರಿಗೆ ನೀಡಿದ್ದ ಒಂದು ಭರವಸೆಯನ್ನು ಪೂರ್ಣ ಈಡೇರಿಸಿಲ್ಲ. ರೈತರ ಆದಾಯದ ದುಪ್ಪಟ್ಟು, ಯುವಜನರಿಗೆ ವಾರ್ಷಿಕ 2ಕೋಟಿ ಉದ್ಯೋಗ, ಮಹಿಳೆಯರಿಗೆ ರಕ್ಷಣೆ, ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಅಗ್ಗದ ದರದಲ್ಲಿ ಅಗತ್ಯವಸ್ತುಗಳ ಪೂರೈಕೆ ಭರವಸೆಗಳನ್ನು ನೀಡಿ ಮೋದಿಯವರು ಚುನಾವಣೆಯಲ್ಲಿ ಗೆದ್ದಿದ್ದರು. ಗೆದ್ದ ನಂತರ ಜನರಿಗೆ ನೀಡಿದ್ದ ಭರವಸೆಗಳನ್ನು ಮರೆತು ದೇವರು-ಧರ್ಮದ ಹೆಸರಿನ ಭಾವನಾತ್ಮಕ ರಾಜಕಾರಣ, ಉದ್ಯಮಿಗಳ ತುಷ್ಟೀಕರಣದಲ್ಲಿ ಮುಳುಗಿ ಹೋಗಿದ್ದಾರೆ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕಳೆದ ಹತ್ತು ವರ್ಷಗಳ ನರೇಂದ್ರ ಮೋದಿಯವರ ಅನ್ಯಾಯಕಾಲದ ವಿವರಗಳನ್ನು ಅಂಕಿಅಂಶಗಳ ಸಹಿತ ಕರ್ನಾಟಕದ ಜನತೆಯ ಮುಂದೆ ಇಡುತ್ತಿದ್ದೇನೆ. ದೇಶ ಇಂದು ಅಮೃತ ಕಾಲದಲ್ಲಿ ಇದೆಯೋ? ಅನ್ಯಾಯದ ಕಾಲದಲ್ಲಿ ಇದೆಯೋ? ಎಂದು ಜನರೇ ತೀರ್ಮಾನಿಸಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

LEAVE A REPLY

Please enter your comment!
Please enter your name here