Home Uncategorized Isreal- Hamas War: ಭಾರತದ ಆರ್ಥಿಕ ಕಾರಿಡಾರ್ ಯೋಜನೆಗೆ ಯುದ್ಧದ ಕಾರ್ಮೋಡ

Isreal- Hamas War: ಭಾರತದ ಆರ್ಥಿಕ ಕಾರಿಡಾರ್ ಯೋಜನೆಗೆ ಯುದ್ಧದ ಕಾರ್ಮೋಡ

31
0
ದೆಹಲಿ: ಇಸ್ರೇಲ್ – ಹಮಾಸ್ (Isreal- Hamas) ಬಂಡುಕೋರರ ಮಧ್ಯೆ ಮಹಾ ಸಂಘರ್ಷವೇ ನಡೆಯುತ್ತಿದೆ. ಇದರಿಂದ ಭಾರತದ (India) ಮಹತ್ವಾಕಾಂಕ್ಷೆಯ ಯೋಜನೆಯ ಮೇಲೆ ಈಗ ಯುದ್ಧದ ಕಾರ್ಮೋಡ ಕವಿದಿದೆ.

ಡ್ರ್ಯಾಗನ್ ಚೀನಿಗೆ (China) ಸೆಡ್ಡು ಹೊಡೆದಿದ್ದ ಭಾರತದ ಡ್ರೀಮ್ ಪ್ರಾಜೆಕ್ಟ್ ಗೆ ಈಗ ಢವಢವ ಶುರುವಾಗಿದೆ. ಒಂದು ತಿಂಗಳ ಹಿಂದಷ್ಟೇ ದೆಹಲಿಯಲ್ಲಿ ಜಿ-20 ಶೃಂಗಸಭೆ ನಡೆಸಿದ್ದ ಭಾರತ, ತನ್ನ ಆರ್ಥಿಕ ಕಾರಿಡಾರ್ ಯೋಜನೆಯ ಘೋಷಣೆ ಮಾಡಿತ್ತು. ಭಾರತ ಜಾಗತಿಕವಾಗಿ ಪ್ರಬಲವಾಗೋದಕ್ಕೆ ಆರ್ಥಿಕ ಬಲ ತುಂಬೋದಕ್ಕೆ ಸಹಾಯ ಮಾಡುವ ಬಹುದೊಡ್ಡ ಕಾರಿಡಾರ್ ಯೋಜನೆ ಇದಾಗಿದೆ.

ಅಮೆರಿಕ (America), ಸೌದಿ ಅರೇಬಿಯಾ (Saudi Arabia), ಯುಎಇ, ಫ್ರಾನ್ಸ್, ಜರ್ಮನಿ, ಇಟಲಿ ಹಾಗೂ ಐರೋಪ್ಯ ಒಕ್ಕೂಟಗಳಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಚೀನಾದ ಬೆಲ್ಟ್ & ರೋಡ್ ಯೋಜನೆಗೆ ಟಾಂಗ್ ಕೊಡುವ ಉದ್ದೇಶದಿಂದಲೇ ಈ ಯೋಜನೆ ಮಾಡಲಾಗ್ತಿದೆ. ಆದರೆ ಈಗ ಯೋಜನೆಗೆ ಇಸ್ರೇಲ್ – ಹಮಾಸ್ ಸಂಘರ್ಷ ಅಡ್ಡಿಯಾಗುವ ಭೀತಿ ಎದುರಾಗಿದೆ. ರೈಲುಮಾರ್ಗ, ಹಡಗಿನಿಂದ ರೈಲು ಜಾಲಗಳು ಮತ್ತು ರಸ್ತೆ ಸಾರಿಗೆ ಮಾರ್ಗಗಳನ್ನು ಕಾರಿಡಾರ್ ಗಳಲ್ಲಿ ವಿಸ್ತರಿಸುವ ಯೋಜನೆ ಇದಾಗಿದೆ.

The post Isreal- Hamas War: ಭಾರತದ ಆರ್ಥಿಕ ಕಾರಿಡಾರ್ ಯೋಜನೆಗೆ ಯುದ್ಧದ ಕಾರ್ಮೋಡ appeared first on Ain Live News.

LEAVE A REPLY

Please enter your comment!
Please enter your name here