Home Uncategorized Isreal War: ನಾನು ಇಸ್ರೇಲ್‍ನ ಕೇಂದ್ರ ಪ್ರದೇಶಲ್ಲಿದ್ದೇನೆ, ನಾನಿರುವ ಪ್ರದೇಶ ಸುರಕ್ಷಿತವಾಗಿದೆ: ಭಾರತೀಯ ಮೂಲದ ನಿವಾಸಿ...

Isreal War: ನಾನು ಇಸ್ರೇಲ್‍ನ ಕೇಂದ್ರ ಪ್ರದೇಶಲ್ಲಿದ್ದೇನೆ, ನಾನಿರುವ ಪ್ರದೇಶ ಸುರಕ್ಷಿತವಾಗಿದೆ: ಭಾರತೀಯ ಮೂಲದ ನಿವಾಸಿ ಹೇಳಿಕೆ

20
0
ಜೆರುಸಲೆಂ: ಸದ್ಯ ನಾವೇಲ್ಲರೂ ಸೇಫ್ ಆಗಿದ್ದೇವೆ ಅಂತಾನೇ ಹೇಳಬಹುದು. ಅದರಲ್ಲೂ ನಾನಿರುವ ಪ್ರದೇಶ ಸುರಕ್ಷಿತವಾಗಿದೆ. ನಾನು ಇಸ್ರೇಲ್‍ನ ಕೇಂದ್ರ ಪ್ರದೇಶಲ್ಲಿದ್ದೇನೆ ಎಂದು ಇಸ್ರೇಲ್‍ನಲ್ಲಿ (Isreal) ನೆಲೆಸಿರುವ ಭಾರತೀಯ ಮೂಲದ ಲೆನಾರ್ಡ್ ಫೆರ್ನಾಂಡೀಸ್ ಹೇಳಿದ್ದಾರೆ.

ಇಸ್ರೇಲಿನ  ಸದ್ಯದ ಪರಿಸ್ಥಿತಿಯನ್ನು ಬಿಚ್ಚಿಟ್ಟರು. ಶನಿವಾರ ಎರಡು ಬಾರಿ ಮಿಸೆಲ್ ಬರುವ ಮುನ್ಸೂಚನೆ ಸಿಕ್ಕಿತ್ತು. ಆಗ ನಾವು ಶೆಲ್ಟರ್ ಇಲ್ಲಿನ ಬಾಂಬ್ ರೂಮ್ ಅಂತೀವಿ. ಇಲ್ಲಿನ ಭಾಷೆಯಲ್ಲಿ ಮಮ್ಮದ್ ಅಂತಾ ಕರೀತಿವಿ. ಅಲ್ಲಿ ಹೋಗಿ ಸೇಫ್ ಆಗಿ ಇದ್ವಿ ಅಂದ್ರು.

ಒಟ್ಟಿನಲ್ಲಿ ಸದ್ಯ ಇಲ್ಲಿನ ಪರಿಸ್ಥಿತಿ ಸೇಫ್ ಆಗಿದೆ. ಕಳೆದ 14 ವರ್ಷಗಳಿಂದ ಇಲ್ಲಿ ವಾಸವಿದ್ದೇನೆ. ಹೀಗಾಗಿ ನನಗೆ ಅಷ್ಟೊಂದು ಭಯ ಆಗ್ತಿಲ್ಲ. ಯಾಕೆಂದರೆ ಇದಕ್ಕಿಂತ ಮುಂಚೆಯೂ ಈ ರೀತಿಯ ದೊಡ್ಡಮಟ್ಟದ ಶಬ್ಧಗಳನ್ನು ಕೇಳಿದ್ದೇವೆ. ಶನಿವಾರ ಸಂಜೆಯೂ ಒಂದು ಬಾರಿ ಮುನ್ಸೂಚನೆ ಸಿಕ್ಕಿತ್ತು. ಈ ವೇಳೆ ಕೂಡ ನಾವು ಬಂಕರ್ ಗಳಿಗೆ ತೆರಳಿ ಸುರಕ್ಷಿತವಾದೆವು. ನಂತರ ಕೇಳಿದ ಶಬ್ದದ ಪ್ರಕಾರ ರಾಕೆಟ್‍ಗಳು ಇಂಟರ್ ಸೆಪ್ಟ್ ಆಗಿವೆ. ಅಂದ್ರೆ ಆಂಟಿ ಮಿಸೈಲ್‍ನಿಂದ ಧ್ವಂಸ ಮಾಡಿವೆ. ಇಲ್ಲಿನ ಆಂಟಿ ಮಿಸೈಲ್ ಬ್ಲಾಸ್ಟ್ ಮಾಡುವಾಗ ಆ ಶಬ್ಧಗಳು ಸ್ವಲ್ಪ ಭಯಂಕರವಾಗಿರುತ್ತವೆ. ಇದು ಹೊಸಬರಿಗೆ ಸ್ವಲ್ಪ ಭಯ ಹುಟ್ಟಿಸುತ್ತೆ ಎಂದು ತಿಳಿಸಿದರು

The post Isreal War: ನಾನು ಇಸ್ರೇಲ್‍ನ ಕೇಂದ್ರ ಪ್ರದೇಶಲ್ಲಿದ್ದೇನೆ, ನಾನಿರುವ ಪ್ರದೇಶ ಸುರಕ್ಷಿತವಾಗಿದೆ: ಭಾರತೀಯ ಮೂಲದ ನಿವಾಸಿ ಹೇಳಿಕೆ appeared first on Ain Live News.

LEAVE A REPLY

Please enter your comment!
Please enter your name here