ಶ್ರೀಹರಿಕೋಟ: ‘ಓಷನ್‌ಸ್ಯಾಟ್ 3’(Oceansat-3) ಸೇರಿದಂತೆ 9 ಉಪಗ್ರಹಗಳನ್ನು ಒಳಗೊಂಡ ‘ಪಿಎಸ್ಎಲ್ವಿ-ಸಿ 54 (PSLV C 54)’ ರಾಕೆಟ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಕೆಲವೇ ಗಂಟೆಗಳಲ್ಲಿ ಉಡಾವಣೆ ಮಾಡಲಿದೆ. ಉಪಗ್ರಹಗಳ ಉಡಾವಣೆಗೆ ಕ್ಷಣಗಣನೆ ಶುಕ್ರವಾರವೇ ಆರಂಭವಾಗಿತ್ತು. ಕೊನೆಯ ಕ್ಷಣದ ಸಿದ್ಧತೆಯಲ್ಲಿ ಇಸ್ರೋ ವಿಜ್ಞಾನಿಗಳಿದ್ದು, ಯಶಸ್ವಿ ಉಡಾವಣೆಯನ್ನು ಎದುರುನೋಡುತ್ತಿದ್ದಾರೆ.
ಪಿಎಸ್ಎಲ್ವಿ ಎಕ್ಸ್ಎಲ್ ವರ್ಷನ್ನ ರಾಕೆಟ್ 11.56ಕ್ಕೆ ಉಡಾವಣೆಗೊಳ್ಳಲಿದೆ. ಉಡಾವಣೆಯಾದ 2 ಗಂಟೆ 20 ನಿಮಿಗಳಲ್ಲಿ ಉಪಗ್ರಹಗಳನ್ನು ಸನ್-ಸಿಂಕ್ರೋನಸ್ ಧ್ರುವೀಯ ಕಕ್ಷೆಯಲ್ಲಿ ನೆಲೆಗೊಳಿಸಲಾಗುವುದು ಎಂದು ಇಸ್ರೋ ತಿಳಿಸಿದೆ.
#WATCH | Andhra Pradesh: PSLV-C54 being integrated at the Satish Dhawan Space Centre in Sriharikota.
PSLV-C54 rocket will be launched from Sriharikota on Saturday.
(Source: ISRO) pic.twitter.com/PDo6xrdrNR
— ANI (@ANI) November 25, 2022
ಓಷನ್‌ಸ್ಯಾಟ್ 3 ಹಾಗೂ ಆನಂದ್ ಉಪಗ್ರಹಗಳು ಸೇರಿದಂತೆ ಇತರ 8 ನ್ಯಾನೊ ಉಪಗ್ರಹಗಳು ಕಕ್ಷೆ ಸೇರಲಿವೆ. ಈ ಪೈಕಿ ಪಿಕ್ಸ್‌ಕ್ಷೆಲ್‌ನ ಭೂತಾನ್‌ಸ್ಯಾಟ್, ಅಮೆರಿಕದ ಸ್ಪೇಸ್‌ಫ್ಲೈಟ್‌ನ ನಾಲ್ಕು ಆ್ಯಸ್ಟ್ರೋಕಾಸ್ಟ್ ಉಪಗ್ರಹಗಳು ಕೂಡ ಸೇರಿವೆ. ಸಾಗರ ವೀಕ್ಷಣೆ, ಭೂ ವೀಕ್ಷಣೆ, ಇಂಡೊ-ಫ್ರೆಂಚ್ ಸಹಭಾಗಿತ್ವ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಉಪಗ್ರಹಗಳೂ ಇದರಲ್ಲಿ ಸೇರಿವೆ ಎಂದು ಇಸ್ರೋದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆನಂದ್ ನ್ಯಾನೊ ಉಪಗ್ರಹ ಭೂಮಿಯ ಕೆಳ ಕಕ್ಷೆಯಲ್ಲಿ ಮೈಕ್ರೋಸ್ಯಾಟಲೈಟ್ ಬಳಸಿಕೊಂಡು ಭೂಮಿಯ ವೀಕ್ಷಣೆ ನಡೆಸಲಿದೆ. ಥೈಬೋಲ್ಟ್ ಉಪಗ್ರಹವು ಸಂವಹನಕ್ಕೆ ಸಂಬಂಧಿಸಿದ್ದಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿSathish d