Home ಅಪರಾಧ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಕಾನ್ಸ್‌ಟೇಬಲ್ ಮೃತದೇಹ ಪತ್ತೆ ಮಾಡಿದ್ದೇ ರೋಚಕ

ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಕಾನ್ಸ್‌ಟೇಬಲ್ ಮೃತದೇಹ ಪತ್ತೆ ಮಾಡಿದ್ದೇ ರೋಚಕ

21
0

ಬೆಂಗಳೂರು:  ಮಡಿವಾಳ ಪೊಲೀಸ್ ಕಾನ್ಸ್‌ಟೇಬಲ್‌  ಆಹತ್ಯೆ ಪ್ರಕರಣದಲ್ಲಿ ಶಿವರಾಜ್ ಮೃತದೇಹ ಪತ್ತೆ ಮಾಡಿದ್ದೇ ರೋಚಕವಾಗಿದ್ದು,  ಶಿವರಾಜ್ ಮೃತದೇಹ ಪತ್ತೆ ಮಾಡೋಕೆ ಬರೋಬ್ಬರಿ 250 ಸಿಸಿಟಿವಿಯನ್ನು ಮಡಿವಾಳ ಪೊಲೀಸರು ಜಾಲಾಡಿದ್ದಾರೆ.

ಸುಬ್ರಮಣ್ಯಪುರ ಪೊಲೀಸರು ಹಾಗೂ ಮಡಿವಾಳ ಪೊಲೀಸರಿಂದ ಶಿವರಾಜ್‌ಗಾಗಿ ಹುಡುಕಾಟ ನಡೆದಿತ್ತು. ಆದರೆ ಮಡಿವಾಳ ಪೊಲೀಸ್ ಸಿಬ್ಬಂದಿಯಾದ ಹಿನ್ನೆಲೆ ಇನ್ಸ್ಪೆಕ್ಟರ್ ಸೂಚನೆ ಮೇರೆಗೆ ಮಡಿವಾಳ ಪೊಲೀಸರೇ ಹುಡುಕಾಟ ಶುರು ಮಾಡಿದ್ದರು.

ಸುಬ್ರಹ್ಮಣ್ಯಪುರದಿಂದ ಮೈಸೂರು ರಸ್ತೆಯ ಜ್ಞಾನಭಾರತಿ ಮೆಟ್ರೊ ಸ್ಟೇಷನ್‌ವರೆಗೂ ಸಿಸಿಟಿವಿ ಪರಿಶೀಲನೆ ಮಾಡಲಾಗಿತ್ತು. ಸತತ ಐದು ದಿನಗಳಿಂದ ನಿರಂತರವಾಗಿ ಹುಡುಕಾಟ ನಡೆಸಿದ್ದ ಮಡಿವಾಳ ಪೊಲೀಸರು ಕೊನೆಗೆ ಜ್ಞಾನಭಾರತಿ ಮೆಟ್ರೊ ಸ್ಟೇಷನ್‌ಗೆ ಬಂದು ತಲುಪಿದ್ದಾರೆ. ಈ ವೇಳೆ ಮೆಟ್ರೊ ಸ್ಟೇಷನ್ ಪಾರ್ಕಿಂಗ್‌ನಲ್ಲಿ ಬೈಕ್ ನಿಲ್ಲಿಸಿದ್ದ ಶಿವರಾಜ್ ನಂತರ ನೀರಿನ ಬಾಟಲಿ ಹಿಡಿದು ಬೆಂಗಳೂರು ವಿವಿ ಒಳಗೆ ನಡೆದು ಬಂದಿದ್ದರು.

ಶಿವರಾಜ್ ಬೆಂಗಳೂರು ವಿವಿ ಒಳಗೆ ನಡೆದು ಬಂದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೀಗಾಗಿ ಬೆಂಗಳೂರು ವಿವಿ ಆವರಣದೊಳಗೆ ಹುಡುಕಾಡಿದ್ದ ಸಂದರ್ಭ ಆವರಣದ ಪಾಳು ಬಿದ್ದ ಬಾವಿಯಲ್ಲಿ ಶಿವರಾಜ್ ಮೃತದೇಹ ತೇಲುತ್ತಿರುವುದು ಪತ್ತೆಯಾಗಿದೆ.

ಕೂಡಲೇ ಜ್ಞಾನಭಾರತಿ ಪೊಲೀಸರಿಗೆ ಮಾಹಿತಿ ನೀಡಿದ್ದ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹ ಹೊರತೆಗೆಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ಶಿವರಾಜ್ ಅವರದು ಕೊಲೆಯಲ್ಲ ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದು, ಮೃತದೇಹ ಹೊರತೆಗೆದಾಗ ಮೃತದೇಹಕ್ಕೆ ಕಲ್ಲು ಕಟ್ಟಿರೋದು ಬೆಳಕಿಗೆ ಬಂದಿದೆ. ಸಿಸಿಟಿಯಲ್ಲಿ ಒಬ್ಬನೇ ಬಂದಿರುವುದರಿಂದ ಇದೊಂದು ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.

LEAVE A REPLY

Please enter your comment!
Please enter your name here