ಬೆಂಗಳೂರು: ಐಟಿ ರೇಡ್ ಅಂದ್ರೆ ಅದು ದೊಡ್ಡದೊಡ್ಡ ಕುಳಗಳ ಮೇಲೆ ನೆಡೆಯುವ ದಾಳಿ ಅಂತ ಇತ್ತು. ಆದ್ರೆ ಸಣ್ಣ ಸಣ್ಣ ಅಂಗಡಿಯವರು ದೊಡ್ಡ ಮಟ್ಟದ ವ್ಯಾಪಾರ ಮಾಡಿ ತೆರಿಗೆ ವಂಚನೆ ಮಾಡುವ ವ್ಯಕ್ತಿಗಳಿಗೆ ಐಟಿ ಅಧಿಕಾರಿಗಳು ಬೆಳ್ಳಂಬೆಳ್ಳಗ್ಗೆ ಬಿಗ್ ಶಾಕ್ ನೀಡಿದ್ದಾರೆ.
ಇಂದು ಬೆಳ್ಳಂಬೆಳ್ಳೆ ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿರೊ ಪ್ರತಿಷ್ಠಿತ ಬಿಲ್ಡರ್ಸ್ ,ಉದ್ಯಮಿಗಳ ಮನೆ ಗಳ ಮೇಲೆ ದಾಳಿ ಮಾಡಿದ್ದಾರೆ. 20 ಕ್ಕೂ ಹೆಚ್ಚು ಇನೋವಾ ಕಾರಿನಲ್ಲಿ ಬಂದ ನೂರಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಏಕ ಕಾಲಕ್ಕೆ ಬೆಂಗಳೂರಿನ 15 ಕ್ಕೂ ಹೆಚ್ಚು ಕಡೆ ದಾಳಿ ಮಾಡಿ ಬಿಲ್ಡರ್ಸ್ ಗೆ , ಉದ್ಯಮಿಗಳಿಗೆ ಸಂಬಂದ ಪಟ್ಟ ಮನೆ, ಕಚೇರಿಗಳಲ್ಲಿ ತಲಾಶ್ ಮಾಡಿ ತೆರಿಗೆ ವಂಚಕರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.
ನಗರದ ಮಲ್ಲೇಶ್ವರಂ , ಮತ್ತಿಕೆರೆ , ಹೆಬ್ಬಾಳ, ಸಹಕಾರ ನಗರ ಹಾಗೂ ಬೆಂಗಳೂರಿನ ಹೊರ ವಲಯ ಸೇರಿದಂತೆ ಒಟ್ಟು 15 ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.ಆರೋಪಿತ ಬಿಲ್ಡರ್ಸ್ ಹಾಗೂ ಉದ್ಯಮಿಗಳು ಕೋಟ್ಯಾಂತರ ರೂಪಾಯಿ ತೆರಿಗೆ ವಂಚನೆ ಮಾಡಿರೋ ಬಗ್ಗೆ ಐಟಿ ಅಧಿಕಾರಿಗಳಿಗೆ ಸಾಕಷ್ಟು ದೂರುಗಳು ಬಂದ ಹಿನ್ನಲೆ ಇಂದು ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಐಟಿ ಅಧಿಕಾರಿಗಳ ದಾಳಿಯ ವೇಳೆ ಬಿಲ್ಡರ್ಸ್ , ಉದ್ಯಮಿಗಳು ತೆರಿಗೆ ವಂಚನೆ ಮಾಡಿರೋ ಬಗ್ಗೆ ದಾಖಲಾತಿ ಹಾಗೂ ಒಂದಷ್ಟು ಬ್ಯಾಂಕ್ ಡಿಟೈಲ್ಸ್ ಗಳು ಲಭ್ಯವಾಗಿದ್ದಾವೆ.
ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಐಟಿ ದಾಳಿಗಳು ನಡೆಯುತ್ತಿವೆ.ಮೂರು ದಿನಗಳ ಹಿಂದೆ ಜ್ಯೂವಲ್ಲರಿಸ್ , ಡಾಕ್ಟರ್ಸ್ , ಗಳ ಮನೆ ಕಚೇರಿ ಮೇಲೆ ದಾಳಿ ಮಾಡಿದ್ದ ಐಟಿ ಅಧಿಕಾರಿಗಳು ಮುಂದುವರೆದ ಭಾಗವಾಗಿ ಇಂದು ಉದ್ಯಮಿಗಳು ಹಾಗೂ ಬಿಲ್ಡರ್ ಮನೆ ಕಚೇರಿಗಳ ಮೇಲೆ ದಾಳಿ ಮಾಡಿ ತೆರಿಗೆ ವಂಚನೆ ಸಂಬಂದ ಪಟ್ಟ ದಾಖಲಾತಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
The post IT Raid: ಬಿಲ್ಡರ್ಸ್ , ಉದ್ಯಮಿಗಳ ಮನೆ ಮೇಲೆ ಐಟಿ ರೇಡ್: ಕೊನೆಗೆ ಅಧಿಕಾರಿಗಳಿಗೆ ಸಿಕ್ಕಿದ್ದೇನು? appeared first on Ain Live News.