Jagdish Shettar follower writes letter in Blood, claims his victory 100 per cent
ಹುಬ್ಬಳ್ಳಿ:
ಈ ಬಾರಿ ವಿಧಾನಸಭೆ ಚುನಾವಣಾ ಕಣದಲ್ಲಿ ರಕ್ತ ರಾಜಕೀಯ ಭಾರೀ ಸದ್ದು ಮಾಡುತ್ತಿದ್ದು, ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿದ್ದರು.
ರಾಜಕೀಯ ನಾಯಕರು ಕೇವಲ ಹೇಳಿಕೆ ನೀಡಿದ್ದರು. ಆದರೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಅಭಿಮಾನಿಯೊಬ್ಬ ರಕ್ತದಲ್ಲಿ ಬರೆದು ಕೊಟ್ಟಿದ್ದಾರೆ. ಜಗದೀಶ್ ಶೆಟ್ಟರ್ 100ಕ್ಕೆ 100 ಗೆಲ್ತಾರೆ ಎಂದು ರಕ್ತದಲ್ಲಿ ಪತ್ರ ಬರೆಯುವ ಮೂಲಕ ಧಾರವಾಡ ಸೆಂಟ್ರಲ್ ನಲ್ಲಿ ಜಗದೀಶ್ ಶೆಟ್ಟರ್ ಗೆಲ್ಲೋದಿಲ್ಲ ಎಂದಿದ್ದ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿ ನಿವಾಸಿಯಾಗಿರುವ ಶೆಟ್ಟರ್ ಅಭಿಮಾನಿ ಮಂಜುನಾಥ ಅವರು ರಕ್ತದಲ್ಲಿ ‘ಮಾನ್ಯ ಜಗದೀಶ್ ಶೆಟ್ಟರ್ 100ಕ್ಕೆ 100ರಷ್ಟು ವಿಜಯಶಾಲಿ ಆಗುತ್ತಾರೆ. ರಕ್ತದಲ್ಲಿ ಬರೆದುಕೊಡುತ್ತೇನೆ. ಈ ಸಾರಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬರುತ್ತದೆ ಎಂದು ಬರೆದಿರುವ ಆತ, ಆನಂತರ ಪತ್ರದ ಕೆಳಭಾಗದಲ್ಲಿ ಜೈ ಕಾಂಗ್ರೆಸ್’ ಎಂದು ಹಾಕಿ, ಆನಂತರ ತನ್ನ ಹೆಸರಾದ ಮಂಜುನಾಥ ಎನ್. ಯಂಟ್ರುವಿ, ಕಾರ್ಯಕರ್ತ, ಹುಬ್ಬಳ್ಳಿ ಎಂದು ಬರೆದಿದ್ದಾರೆ.
ಜಗದೀಶ್ ಶೆಟ್ಟರ್ ಅಭಿಮಾನಿ ಬರೆದಿರುವ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
