Home ರಾಜಕೀಯ ರಕ್ತದಲ್ಲಿ ಪತ್ರ ಬರೆದಿದ್ದ ಅಭಿಮಾನಿ ನಿವಾಸಕ್ಕೆ ಜಗದೀಶ್ ಶೆಟ್ಟರ್ ಭೇಟಿ

ರಕ್ತದಲ್ಲಿ ಪತ್ರ ಬರೆದಿದ್ದ ಅಭಿಮಾನಿ ನಿವಾಸಕ್ಕೆ ಜಗದೀಶ್ ಶೆಟ್ಟರ್ ಭೇಟಿ

77
0
Jagdish Shettar visits residence of fan who wrote letter in blood
Jagdish Shettar visits residence of fan who wrote letter in blood

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ನಲ್ಲಿ ಜಗದೀಶ್ ಶೆಟ್ಟರ್ ಅವರು 100ಕ್ಕೆ 100 ಗೆಲ್ಲುತ್ತಾರೆ ಎಂದು ರಕ್ತದಲ್ಲಿ ಪತ್ರ ಬರೆದಿದ್ದ ಯುವಕ ಮಂಜುನಾಥ್ ಅವರ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್​ ಭೇಟಿ ಅವರು ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಕ್ತದಲ್ಲಿ ಬರೆದು ಕೊಡುತ್ತೇನೆ ಶೆಟ್ಟರ್ ಗೆಲ್ಲುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತ ಮಂಜುನಾಥ್ ಅವರು, 100ಕ್ಕೆ 100 ಜಗದೀಶ್ ಶೆಟ್ಟರ್ ಗೆಲ್ಲುತ್ತಾರೆ ಎಂದು ರಕ್ತದಲ್ಲಿ ಪತ್ರ ಬರೆದು ತಿರುಗೇಟು ನೀಡಿದ್ದರು.

ಇದನ್ನು ಓದಿ: ಜಗದೀಶ್ ಶೆಟ್ಟರ್ 100ಕ್ಕೆ 100 ಗೆಲ್ತಾರೆ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ: ರಕ್ತದಲ್ಲೇ ಪತ್ರ ಬರೆದ ಅಭಿಮಾನಿ!

ಮಂಜುನಾಥ್ ಅವರ ಮನೆಗೆ ಭೇಟಿ ನೀಡಿದ ಜಗದೀಶ್ ಶೆಟ್ಟರ್​ ಅವರು, ತಮ್ಮ ಗೆಲುವಿಗಾಗಿ ರಕ್ತದಲ್ಲಿ ಶುಭ ಹಾರೈಸಿದ ಮಂಜುನಾಥನಿಗೆ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ಮಂಜುನಾಥ್ ಸಹ ಚುನಾವಣೆಯಲ್ಲಿ ಗೆಲುವು ನಿಮ್ಮದಾಗಲಿ ಎಂದು ಜಗದೀಶ್​ ಶೆಟ್ಟರ್ ಅವರಿಗೆ ಶುಭ ಹಾರೈಸಿದರು.​

“ರಕ್ತದಾನ ಶ್ರೇಷ್ಠದಾನ ಯಾರು ಸಹ ರಕ್ತವನ್ನು ವ್ಯರ್ಥ ಮಾಡಬೇಡಿ ಅವಶ್ಯಕತೆ ಇರುವವರಿಗೆ ದಾನ ಮಾಡಿ”

ನೂರಕ್ಕೆ ನೂರರಷ್ಟು ನಾನು ಗೆಲ್ಲುತ್ತೇನೆ ಎಂದು ತಮ್ಮ ರಕ್ತದಲ್ಲಿ ಬರೆದು ದಿಟ್ಟ ಉತ್ತರವನ್ನು ನೀಡಿದಂತಹ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಶ್ರೀ ಮಂಜುನಾಥ ಯಂಟ್ರುವಿ ಅವರನ್ನು ಇಂದು ಆತ್ಮೀಯವಾಗಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here