Home ಅಪರಾಧ ಜ್ಯುವೆಲರಿ ಶಾಪ್ ಮಾಲೀಕನ ಮಗಳಿಂದ 15 ಲಕ್ಷ ರೂ ಮೌಲ್ಯದ ಚಿನ್ನ ವಸೂಲಿ: ಆರೋಪಿ ಅರೆಸ್ಟ್

ಜ್ಯುವೆಲರಿ ಶಾಪ್ ಮಾಲೀಕನ ಮಗಳಿಂದ 15 ಲಕ್ಷ ರೂ ಮೌಲ್ಯದ ಚಿನ್ನ ವಸೂಲಿ: ಆರೋಪಿ ಅರೆಸ್ಟ್

18
0

ಬೆಂಗಳೂರು: ಜ್ಯುವೆಲರಿ ಶಾಪ್ ಮಾಲೀಕನ ಮಗಳಿಂದ ಬರೊಬ್ಬರಿ 15 ಲಕ್ಷ ರೂ. ಮೌಲ್ಯದ ಚಿನ್ನವನ್ನು ಆಕೆಯ ಗೆಳೆಯನೇ ವಸೂಲಿ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ.

ಲವರ್ ಜೊತೆಗಿನ ಖಾಸಗಿ ವಿಡಿಯೋ ವೈರಲ್ ಬೆದರಿಕೆ ಹಾಕಿ, ಚಿನ್ನ ವಸೂಲಿ ಮಾಡಲಾಗಿದೆ. ಸದ್ಯ ಬ್ಲ್ಯಾಕ್ ಮೇಲ್​ ಮಾಡಿದ ಆರ್​ಟಿ ನಗರದ ಅರ್ಪಿತ್​ ನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಮಾರಾಟ ಮಾಡಿದ್ದ ಅಂಗಡಿಗಳ ಪತ್ತೆ ಹಚ್ಚಿ 15 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಜಯನಗರ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಇತ್ತ ಮನೆಯಲ್ಲಿದ್ದ 268 ಗ್ರಾಂ ಚಿನ್ನಾಭರಣ ಕಾಣದ ಹಿನ್ನಲೆ ಜ್ಯುವೆಲರಿ ಮಾಲೀಕ ಹುಡುಕಾಡಿದ್ದಾರೆ. ಈ ವೇಳೆ ತನ್ನ ಗೆಳೆಯನಿಗೆ ಕೊಟ್ಟಿದ್ದಾಗಿ ಮಗಳು ಹೇಳಿದ್ದಾರೆ. ಮುಂಬೈನಿಂದ ಓದಲು ಬಂದಿದ್ದ. ಓದು ಮುಗಿದ ಬಳಿಕ ಚಿನ್ನದ ಸಮೇತ ಮುಂಬೈ ಹೊಗಿದ್ದಾನೆ ಎಂದು ಹೇಳಿದ್ದಾಳೆ. ಆ ಬಳಿಕ ಪೊಷಕರಿಂದ ಜಯನಗರ ಠಾಣೆಗೆ ದೂರು ನೀಡಲಾಗಿದೆ.

ಜಯನಗರ ಪೊಲೀಸರು ವಿಚಾರಣೆ ಆರಂಭಿಸಿದ ವೇಳೆ ಅಸಲಿ ಸಂಗತಿ ಬಯಲಾಗಿದೆ. ಯುವತಿ, ಯುತಿಯ ಪ್ರಿಯಕರ ಹಾಗೂ ಬಂಧಿತ ಸ್ನೇಹಿತ ಅರ್ಪಿತ್, ಎರಡು ವರ್ಷದ ಹಿಂದೆ ಒಂದೇ ಕಾಲೇಜಿನಲ್ಲಿ ಒಟ್ಟಿಗೆ ​​ವ್ಯಾಸಂಗ ಮಾಡಿದ್ದರು.

ಈ ವೇಳೆ ಯುವತಿ ಹಾಗೂ ಪ್ರಿಯಕರ ಒಟ್ಟಿಗೆ ಇದ್ದ ಖಾಸಗಿ ವಿಡಿಯೋಗಳನ್ನು ಬಂಧಿತ ಅರ್ಪಿತ್​ ಮಾಡಿದ್ದಾನೆ. ಪಿಯುಸಿ ಡ್ರಾಪ್ ಔಟ್ ಆದ ಬಳಿಕ ಇದೇ ವಿಡಿಯೋಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಯುವತಿಗೆ ಬ್ಲ್ಯಾಕ್ ಮೇಲ್​ ಮಾಡಿದ್ದಾನೆ. ಬೆದರಿಕೆಗೆ ಹೆದರಿದ ಯುವತಿ ಮನೆಯಲ್ಲಿದ್ದ 15 ಲಕ್ಷ ರೂ. ಮೌಲ್ಯದ ಚಿನ್ನವನ್ನು ಆತನಿಗೆ ನೀಡಿದ್ದಳು ಎನ್ನಲಾಗಿದೆ.

LEAVE A REPLY

Please enter your comment!
Please enter your name here