Home Uncategorized JIO: ಜಿಯೋ ಧಮಾಕ ಪ್ಲಾನ್: ಈ ಯೋಜನೆ ಹಾಕಿಸಿಕೊಂಡರೆ ಒಂದು ವರ್ಷದ ವರೆಗೆ ಟೆನ್ಶನ್ ಬೇಡ

JIO: ಜಿಯೋ ಧಮಾಕ ಪ್ಲಾನ್: ಈ ಯೋಜನೆ ಹಾಕಿಸಿಕೊಂಡರೆ ಒಂದು ವರ್ಷದ ವರೆಗೆ ಟೆನ್ಶನ್ ಬೇಡ

31
0

ರಿಲಯನ್ಸ್ ಒಡೆತನದ ಜಿಯೋ (Reliance JIO) ಸಂಸ್ಥೆ ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ಭದ್ರವಾಗಿದೆ. ಏರ್ಟೆಲ್ (Airtel), ವೊಡಾಫೋನ್ ಐಡಿಯಾ ಮೇಲಕ್ಕೇರಲು ಹರಸಾಹಸ ಪಡುತ್ತಿದ್ದರೂ ಜಿಯೋ ಆಕರ್ಷಕ ಆಫರ್​ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಲೇ ಇದೆ. ಇನ್ನೇನು ಕೆಲವೇ ದಿನಗಳಲ್ಲಿ 5G ಸಂಪರ್ಕ ಕೂಡ ಸಿಗಲಿದ್ದು ಜಿಯೋ ಯಾವರೀತಿಯ ಯೋಜನೆಗಳನ್ನು ಬಿಡುಗಡೆ ಮಾಡುತ್ತವೆ ಎಂಬುದು ಕುತೂಹಲ ಕೆರಳಿಸಿದೆ. ಈಗಾಗಲೇ ಜಿಯೋದ ಅನೇಕ ಪ್ಲಾನ್​ಗಳು ಬಳಕೆದಾರರ ಮನ ಗೆದ್ದಿದೆ. ಇದರಲ್ಲಿ ವಾರ್ಷಿಕ ಯೋಜನೆ ಕೂಡ ಒಂದು. ಹಾಗಾದರೆ ಜಿಯೋದ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್​ಗಳು (Prepaid Plan) ಯಾವುವು?, ಇದರಲ್ಲಿ ಏನೆಲ್ಲ ಆಫರ್​ಗಳಿವೆ ಎಂಬುದನ್ನು ನೋಡೋಣ.

ಜಿಯೋ 2545 ರೂ. ಪ್ಲಾನ್: ಜಿಯೋದ ಈ ಯೋಜನೆ 336 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದಿನಕ್ಕೆ 1.5GB ಡೇಟಾ ಪ್ರಯೋಜನ ಸಿಗಲಿದ್ದು ಒಟ್ಟಾರೆಯಾಗಿ 504GB ಡೇಟಾ ಪಡೆಯಬಹುದು. ಜೊತೆಗೆ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಆ್ಯಕ್ಸಸ್ ನೀಡಲಾಗುತ್ತದೆ.

ಜಿಯೋ 2879 ರೂ. ಪ್ಲಾನ್: ಜಿಯೋದ ಈ ಯೋಜನೆ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದಿನಕ್ಕೆ 2GB ಡೇಟಾ ಪ್ರಯೋಜನ ಸಿಗಲಿದ್ದು ಒಟ್ಟಾರೆಯಾಗಿ 730GB ಡೇಟಾ ಪಡೆಯಬಹುದು. ಜೊತೆಗೆ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಆ್ಯಕ್ಸಸ್ ನೀಡಲಾಗುತ್ತದೆ.

EXPLAINED: ಕಂಪ್ಯೂಟರ್​ಗೆ ವೈರಸ್ ಹೇಗೆ ಅಟ್ಯಾಕ್ ಆಗುತ್ತದೆ?: ಇದರಿಂದ ಎಚ್ಚರ ವಹಿಸುವುದು ಹೇಗೆ?

ಜಿಯೋ 2999 ರೂ. ಪ್ಲಾನ್: ಈ ಯೋಜನೆಯು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದಿನಕ್ಕೆ 2.5GB ಡೇಟಾ ಪ್ರಯೋಜನ ಸಿಗಲಿದ್ದು ಒಟ್ಟಾರೆಯಾಗಿ 912.5GB ಡೇಟಾ ಪಡೆಯಬಹುದು. ಜೊತೆಗೆ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಆ್ಯಕ್ಸಸ್ ನೀಡಲಾಗುತ್ತದೆ. ಇದಿಷ್ಟೆ ಅಲ್ಲದೆ ಒಂದು ವರ್ಷದ ಡಿಸ್ನಿ+ ಹಾಟ್​​ಸ್ಟಾರ್ ಚಂದಾದಾರಿಕೆ ಸಿಗುತ್ತದೆ.

ಜಿಯೋ 4199 ರೂ. ಪ್ಲಾನ್: ಜಿಯೋದ ಈ ಯೋಜನೆ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದಿನಕ್ಕೆ ಬರೋಬ್ಬರಿ 3GB ಡೇಟಾ ಪ್ರಯೋಜನ ಸಿಗಲಿದ್ದು ಒಟ್ಟಾರೆಯಾಗಿ 1095GB ಡೇಟಾ ಪಡೆಯಬಹುದು. ಜೊತೆಗೆ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಆ್ಯಕ್ಸಸ್ ನೀಡಲಾಗುತ್ತದೆ. ಅಲ್ಲದೆ ಒಂದು ವರ್ಷದ ಡಿಸ್ನಿ+ ಹಾಟ್​​ಸ್ಟಾರ್ ಚಂದಾದಾರಿಕೆ ನಿಮ್ಮದಾಗಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here