ಬೆಂಗಳೂರು, ಮಾರ್ಚ್ 19, (ಕರ್ನಾಟಕ ವಾರ್ತೆ) : ಕರ್ನಾಟಕ ರಿಯಲ್ ಎಸ್ಡೇಟ್ ನಿಯಂತ್ರಣ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ದ ದಂಡ ವಸೂಲಾತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ, ವಕ್ಪ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಬಿ.ಝಡ್. ಜಮೀರ್ ಅಹಮ್ಮದ್ ಖಾನ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರೇರಾ ಪ್ರಾಧಿಕಾರದಲ್ಲಿ ಕಳೆದ ವರ್ಷಗಳಲ್ಲಿ ಅನುಮೋದನೆಗಾಗಿ 3129 ಪ್ರಸ್ತಾವನೆಗಳು ಸ್ವೀಕರಿಸಲಾಗಿದ್ದು, 2701 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. 243 ಪ್ರಸ್ತಾವನೆಗಳು ಬಾಕಿ ಉಳಿದ್ದಿದ್ದು, 633 ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗಿದೆ ಮತ್ತು 19 ಪ್ರಸ್ತಾವನೆಗಳನ್ನು ವಿಲೇ ಇಡಲಾಗಿದೆ ಎಂದು ತಿಳಿಸಿದರು.
ಪ್ರಾಧಿಕಾರವು ಕೆ-ರೇರಾ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಇಲ್ಲಿಯವರೆಗೆ ಒಟ್ಟು 11495 ದೂರು ದಾಖಲಿಸಿಕೊಂಡಿರುತ್ತದೆ. ಪ್ರಾಜೆಕ್ಟ್ ಗಳಿಗೆ ಸಂಬಂದಿಸಿದಂತೆ 11126 ದಾಖಲಿಸಿಕೊಂಡಿದೆ ಕರ್ನಾಟಕ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು, 2017 ಅನ್ನು ಉಲ್ಲಂಘನೆ ಮಾಡಿದ 1660 ಪ್ರಕರಣಗಳಲ್ಲಿ ದಿನಾಂಕ:31.12.2024ರ ಅಂತ್ಯಕ್ಕೆ ರೂ.758,85,87,682/-ಗಳ ಮೊತ್ತವನ್ನು ದಂಡ ವಿಧಿಸಲಾಗಿದೆ. ದಂಡ ವಸೂಲಾತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸದರು.