Home ಮೈಸೂರು ಜಲಾಶಯ ತುಂಬಿರುವುದು ರೈತರಿಗೆ ಅನುಕೂಲವಾಗಲಿದೆ ಸಿಎಂ

ಜಲಾಶಯ ತುಂಬಿರುವುದು ರೈತರಿಗೆ ಅನುಕೂಲವಾಗಲಿದೆ ಸಿಎಂ

25
0
Kabini -- Karnataka CM says farmers will benefit due to full reservoirs

ಮೈಸೂರು:

ನವೆಂಬರ್ ತಿಂಗಳಲ್ಲಿ ಕೆ.ಆರ್.ಎಸ್ ಮತ್ತು ಕಬಿನಿ ತುಂಬಿರುವುದು ಅಪರೂಪ. ಜಲಾಶಯಗಳು ತುಂಬಿರುವುದ್ದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಅಂತರ ರಾಜ್ಯ ಜಲಾಶಯವಾಗಿದ್ದು, ಈ ಸಂದರ್ಭದಲ್ಲಿ ಕೊರತೆಯಾಗುತ್ತಿತ್ತು. ನಾಲೆ ಮತ್ತು ತಮಿಳುನಾಡಿಗೆ ನೀರು ಬಿಡಲು ತೊಂದರೆಯಾಗುವುದಿಲ್ಲ. ಯಾವಾಗ, ಎಷ್ಟು ಬಿಡುಗಡೆ ಮಾಡಬೇಕೆನ್ನುವುದು ಸಮಿತಿಗಳಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ಮುಖ್ಯಮಂತ್ರಿಯಾದ ನಂತರ ಆಲಮಟ್ಟಿಗೆ ಅರ್ಪಿಸಿದ್ದೆ, ಈಗ ಕಾವೇರಿ ಜಲಾನಯನದ ಎರಡೂ ಜಲಾಶಯಗಳಿಗೆ ಬಾಗಿನ ಅರ್ಪಿಸುತ್ತಿರುವುದು ಸಂತಸ ತಂದಿದೆ ಎಂದರು.

ಬೃಂದಾವನ ಮಾದರಿಯಲ್ಲಿ ಉದ್ಯಾನವನ ಅಭಿವೃದ್ಧಿಪಡಿಸುವ ಬಗ್ಗೆ ಪ್ರಸ್ತಾವನೆ ಇದೆ. ನೀತಿಯನ್ನು ಅನುಸರಿಸಬೇಕಾದೆ. ಸರ್ಕಾರದ ವತಿಯಿಂದ ಕೈಗೊಳ್ಳಬೇಕೋ ಅಥವಾ ಖಾಸಗಿಯವರಿಗೆ ವಹಿಸಬೇಕೋ ಎಂಬ ಬಗ್ಗೆ ಗೊಂದಲವಿದೆ. ಈ ಬಗ್ಗೆ ಆದಷ್ಟು ಬೇಗ ನಿರ್ಧಾರಕ್ಕೆ ಬರಲಾಗುವುದು ಎಂದರು.

ಚುನಾವಣೆ: ಹಾನಗಲ್ ನಲ್ಲಿ ಕಾಂಗ್ರೆಸ್ ಮುನ್ನಡೆಯಾಗಿರುವ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಇನ್ನೂ ಅರ್ಧಕ್ಕಿಂತ ಹೆಚ್ಚು ಮತ ಎಣಿಕೆಯಾಗಬೇಕಿದೆ ಕಾಡು ನೋಡೋಣ ಎಂದರು. ಹಾನಗಲ್ ಕ್ಷೇತ್ರದಲ್ಲಿ ಸದಾ ತೀವ್ರವಾದ ಪೈಪೋಟಿ ಇರುವ ಕ್ಷೇತ್ರ ಎಂದರು.

ಪುನೀತ್ ರಾಜ್ ಕುಮಾರ್ ಗೆ ಪದ್ಮಶ್ರೀ

ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮಶ್ರೀ ನೀಡುವ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, ಅವರ ಬಗ್ಗೆ ಪ್ರೀತಿ ಗೌರವವಿದೆ.ಅವರ ಬಗ್ಗೆ ಸರ್ವಸಮ್ಮತವಾದ ಒಪ್ಪಿಗೆ ಪಡೆದು, ನೀತಿಯ ಪ್ರಕಾರ ಕ್ರಮ ವಹಿಸಲಾಗುವುದು ಎಂದರು.

ಪ್ರವಾಹ ಜಲಾಶಯದ ಕೆಲ ಭಾಗದಲ್ಲಿರುವ ವಸತಿ ಪ್ರದೇಶದಲ್ಲಿ ಪ್ರವಾಹ ಬಂದಾಗ ಮನೆಗಳಿಗೆ ನೀರು ನುಗ್ಗಿ ಹಾನಿಯಾಗುತ್ತಿರುವ ಬಗ್ಗೆ ಪರಿಹಾರ ಕ್ರಮಕೈಗೊಳ್ಳಲಾಗುವುದು ಎಂದರು.

LEAVE A REPLY

Please enter your comment!
Please enter your name here