ಕಲಬುರಗಿ:
ಕೋವಿಡ್-19 ಸಂಕಷ್ಟದ ಸಮಯದಲ್ಲಿ ಪತ್ರಕರ್ತರು ದಿನನಿತ್ಯ ಅಪಾಯಕಾರಿ ಸನ್ನಿವೇಶದಲ್ಲಿ ಕೆಲಸ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಪತ್ರಕರ್ತರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಸಲಹೆ ನೀಡಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ಪತ್ರಕರ್ತರಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಲಸಿಕೆ ಹಾಕಿಸಿಕೊಂಡ ಮೇಲೆ ಕೆಲವರಲ್ಲಿ ಒಂದು ಅಥವಾ ಎರಡು ದಿನ ತಲೆನೋವು, ಜ್ವರದಂತಹ ಸಣ್ಣ-ಪುಟ್ಟ ಅಡ್ಡ ಪರಿಣಾಮ ಕಾಣಿಸಿಕೊಳ್ಳಬಹುದು. ಇದು ಸಹಜವಾಗಿದ್ದು, ಯಾರೂ ಕೂಡ ಹೆದರಬಾದರು. ಧೈರ್ಯವಾಗಿ ಲಸಿಕೆ ಹಾಕಿಸಿಕೊಳ್ಳಿರಿ ಎಂದು ಅವರು ಸಲಹೆ ನೀಡಿದರು.
ZP CEO @dileeshsasi, DHO ಡಾ.ಶರಣಬಸಪ್ಪ ಗಣಜಲಖೇಡ್, KUWJ ಜಿಲ್ಲಾಧ್ಯಕ್ಷ ಭವಾನಿ ಸಿಂಗ್, ವಾರ್ತಾ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ. ಅನೇಕರಿದ್ದರು@KarnatakaVarthe @mla_sudhakar @DHFWKA @csogok @CovidKarnataka @MiraskarRavi @diprcomkarnatak @gulbarga_of
— DIPR-KALABURAGI (@Kalaburgivarthe) May 13, 2021
ಇದೀಗ ಕೋವಿಶೀಲ್ಡ್ ವ್ಯಾಕ್ಸಿನ್ ನೀಡುತ್ತಿದ್ದು, 6 ರಿಂದ 8 ವಾರಗಳಲ್ಲಿ ಮತ್ತೆ 2 ನೇ ಡೋಸ್ ತಪ್ಪದೇ ಪಡೆಯಬೇಕು. ಸಾಮಾಜಿಕ ಆಂತರ ಕಾಪಾಡುವುದು, ಹ್ಯಾಂಡ್ ಸ್ಯಾನಿಟೈಜೇಶನ್ ಮಾಡಿ ಕೊಳ್ಳುವುದು, ಮಾಸ್ಕ್ ಧರಿಸುವುದು ಮುಂತಾದ ಸುರಕ್ಷತಾ ಕ್ರಮಗಳನ್ನು ಹೇಗೆ ಲಸಿಕೆಗೂ ಮುನ್ನ ಅನುಸರಿಸುತ್ತಿದ್ದಿರೋ ಲಸಿಕೆ ನಂತರವೂ ಹಾಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ಮನವಿ ಮಾಡಿದರು.