ಕಲಬುರ್ಗಿ: ಎರಡು ವರ್ಷದ ಮುದ್ದು ಮಗಳನ್ನ ಕೊಲೆ ಮಾಡಿ ನೇಣು ಹಾಕಿದ ತಾಯಿಯೊಬ್ಬಳು ತಾನೂ ಕೂಡ ನೇಣಿಗೆ ಶರಣಾದ ದಾರುಣ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು ತಾಯಿ ಶಿವಲೀಲಾ ಮಗಳು ವರ್ಷಿತಾ ಇಬ್ಬರೂ ಸಾವಿನ ಮನೆ ಸೇರಿದ್ದಾರೆ.
ಗಂಡನ ಮನೆಯವರ ಕಿರುಕುಳ ತಾಳದೇ ಆತ್ಮಹತ್ಯೆ ದಾರಿ ಹಿಡಿದಿದ್ದಾಳೆ ಎನ್ನಲಾಗಿದೆ. ಕೆರೋಳಿ ಗ್ರಾಮದಲ್ಲಿನ ತವರು ಮನೆ ಸೇರಿದ್ದ ಶಿವಲೀಲಾ ಎರಡು ದಿನಗಳ ಹಿಂದಷ್ಟೇ ಗಂಡನ ಮನೆಗೆ ಬಂದಿದ್ದಳು. ವಿಪರ್ಯಾಸ ಅಂದ್ರೆ ಬೆಳಗಾಗೋದ್ರಲ್ಲಿ ಎರಡೂ ಜೀವವೂ ಉಸಿರು ಚೆಲ್ಲಿವೆ.
ಮೂರು ವರ್ಷದ ಹಿಂದೆ ಮರಪಳ್ಳಿ ಗ್ರಾಮದ ಆನಂದ ಜೊತೆ ಮದುವೆಯಾಗಿ ನೆಮ್ಮದಿಯಾಗಿದ್ದ ಶಿವಲೀಲಾ ದಿನಕಳೆದಂತೆ ಗಂಡನ ಕಿರುಕುಳಕ್ಕೆ ಬೇಸತ್ತಿದ್ದಳು ಅನ್ನೋ ಆರೋಪ ಕೇಳಿ ಬಂದಿದೆ.
ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.