ಕಲಬುರಗಿ:
ಟೇಕಾಫ್ ಆದ ನಂತರ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತರಬೇತಿ ನಿರತ ವಿಮಾನವನ್ನಪ ತುರ್ತು ಭೂಸ್ಪರ್ಶ ಮಾಡಲಾಗಿದೆ.
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಪೇಟ್ ಸೀರೂರು ಗ್ರಾಮದ ಬಳಿ ವಿಮಾನ ಭೂಸ್ಪರ್ಶವಾಗಿದ್ದು ಕಲಬುರಗಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿ 15 ಕಿ.ಮೀ ಸಂಚರಿಸಿತ್ತು.
A trainee aircraft of Redbird flight training academy made an emergency landing near Pethsirur village in #Kalaburagi around 9.30am today due to a technical problem.
— KalyanaKarnataka (ಕಲ್ಯಾಣಕರ್ನಾಟಕ) (@KalyanaKarnata) June 25, 2023
One pilot-cum- instructor and another trainee pilot were on the flight. Both are safe. pic.twitter.com/Ey7VUV5Qml
ಆದರೆ ಇಂಜಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಕೂಡಲೇ ಎಚ್ಚೆತ್ತ ಪೈಲೆಟ್, ಸೀರೂರ್ ಗ್ರಾಮದ ಜಮೀನಿನಲ್ಲಿ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ.
ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ವಿಮಾನದಲ್ಲಿದ್ದ ಪೈಲಟ್ ಹಾಗೂ ತರಬೇತಿ ನಿತರ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.