ಬೆಳಗಾವಿ: ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದು ಕನ್ನಡಕ್ಕೆ ಅಪಮಾನ ಮಾಡುವ ನಾಡ ದ್ರೋಹಿಗಳು ಸಾಕಷ್ಟು ಜನರಿದ್ದಾರೆ. ಹೀಗೆಯೇ ನಮ್ಮ ರಾಜ್ಯದ ಗಡಿನಾಡು ಬೆಳಗಾವಿಯ (Belagavi)ಕಾಲೇಜವೊಂದರಲ್ಲಿ ಕನ್ನಡ ಬಾವುಟ (Kannada Flag) ಹಾರಿಸಿದಕ್ಕೆ, ಸಹಪಾಠಿಗಳು ವಿದ್ಯಾರ್ಥಿಗೆ ಥಳಿಸಿರುವ ನಗರದ ಘಟನೆ ಟೀಳಕವಾಡಿಯಲ್ಲಿನ ಗೋಗಟೆ ಕಾಲೇಜಿನಲ್ಲಿ ನಡೆದಿದೆ.
ಟೀಳಕವಾಡಿಯಲ್ಲಿನ ಗೋಗಟೆ ಕಾಲೇಜಿನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಹಿಡಿದು ವಿದ್ಯಾರ್ಥಿ ಡ್ಯಾನ್ಸ್ ಮಾಡಿದ್ದಾನೆ. ಇದನ್ನು ಕಂಡ ಸಹಪಾಠಿಗಳು ಕನ್ನಡ ಬಾವುಟ ಪ್ರದರ್ಶಿಸಿದ ವಿದ್ಯಾರ್ಥಿಗೆ ಥಳಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆದರೆ ಹಲ್ಲೆಗೊಳಗಾದ ವಿದ್ಯಾರ್ಥಿ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಹಲ್ಲೆಗೊಳಗಾದ ಮತ್ತು ಹಲ್ಲೆ ಮಾಡಿದ ವಿದ್ಯಾರ್ಥಿಗಳನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ಟೀಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ