ಇತಿಹಾಸ ತಜ್ಞರ ವರದಿಯಂತೆ ಆಳಿವಿನ ಅಂಚಿನಲ್ಲಿರುವ ಕನ್ನಡ ಭಾಷೆ ಉಳಿಸಲು ಆಂದೋಲನವಾಗಬೇಕು – ವಿಶೇಷ ಆಯುಕ್ತರಾದ ದಯಾನಂದ್
ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕನ್ನಡ ಸಂಘದ ವತಿಯಿಂದ ಬಿ.ಬಿ.ಎಂ.ಪಿ. ಕೇಂದ್ರ ಕಛೇರಿ ಅವರಣದಲ್ಲಿ ನಗರ ದೇವತೆ ಅಣ್ಣಿಮ್ಮ ದೇವಿ ಉತ್ಸವ ಮತ್ತು 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದೀಪಾ ಬೆಳಗಿಸಿ ಕಾರ್ಯಕ್ರಮವನ್ನು ಮುಖ್ಯ ಆಯುಕ್ತರಾದ ಗೌರವ್ ಗುಪ್ತಾರವರು ಉದ್ಘಾಟನೆಯನ್ನು ನೇರವೆರಿಸಿದರು.
ವಿಶೇಷ ಆಯುಕ್ತರಾದ ದಯಾನಂದ್ , ಬೆಂಗಳೂರು ಮಹಾನಗರ ಪಾಲಿಕೆ ಕನ್ನಡ ಸಂಘದ ಅಧ್ಯಕ್ಷರಾದ ಸಂಗೊಳ್ಳಿ ಕೃಷ್ಣಮೂರ್ತಿ , ಪ್ರಧಾನ ಕಾರ್ಯದರ್ಶಿ ಅಮೃತ್ ರಾಜ್ ರವರು ಗಾಯಕಿ ರಮ್ಯ ವಸಿಷ್ಟರವರು ಉಪಸ್ಥಿತರಿದ್ದರು.
66ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಚಲನಚಿತ್ರ ಕಲಾವಿದರಿಗೆ ಮತ್ತು ಕನ್ನಡ ಪರ ಹೋರಾಟಗಾರರಿಗೆ ಸನ್ಮಾನ ಕನ್ನಡ ಚಿತ್ರರಂಗದ ಸಾಧನೆ ಮಾಡಿದ ನಿರ್ದೇಶಕರು ಖಳನಾಯಕ , ಪೋಷಕರು ನಟರುಗಳಾದ ಬಿರಾದಾರ್ ಬೆಂಗಳೂರು ನಾಗೇಶ್ , ಉಮೇಶ್ , ಬಿರಾದಾರ್ ,ಮೂಗು ಸುರೇಶ್ ,ಮೈಸೂರು ರಮಾನಂದ್ ,ಬ್ಯಾಂಕ್ ಜನಾರ್ಧನ್ ,ಡಿಂಗ್ರಿ ನಾಗರಾಜ್ ಮತ್ತು ಶ್ರೀಮತಿ ರೇಖಾದಾಸ್ ,ಮೋಹನ್ ಜುನೇಜ ,ಶ್ರೀಮತಿ ಶೋಭಾ ರಾಘವೇಂದ್ರ ,ಮಂದೀಪ್ ರಾಯ್ ಹಾಗೂ ಕನ್ನಡ ಪರ ಹೋರಾಟಗಾರರಾದ ತಾ.ನಂ.ಕುಮಾರಸ್ವಾಮಿ ,ಡಾ||ಜಿ.ಮುನಿರಾಜು ,ಸದಾಶಿವಯ್ಯ ಜರಗನಹಳ್ಳಿ ಮತ್ತು ಶ್ರೀಮತಿ ಡಾ||ಎನ್.ವಿಜಯಲಕ್ಷ್ಮೀ ,ಕಡಬಗೆರೆ ಮುನಿರಾಜು ,ಶ್ರೀಮತಿ ಶಾಂತಲಾ ಸುರೇಶ್ ,ಎಂ.ನಂಜಪ್ಪ ,ಡಾ||ಲೋಕೇಶ್ ಹೆಗ್ಡೆ ಹಾಗೂ ವಾಟಾಳ್ ವೆಂಕಟೇಶ್ , ಎಂ.ಪ್ರಕಾಶಮೂರ್ತಿರವರಿಗೆ ಮತ್ತು ಕೊರೋನಾ ವಾರಿಯರ್ಸ್ ಗಳಾದ ವೈದ್ಯರು ,ದಾದಿಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು .
ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ರವರು ಮಾತನಾಡಿ ಕರ್ನಾಟಕದಲ್ಲಿ ಕನ್ನಡ ಭಾಷೆ ಸಾರ್ವಭೌಮ.ನಮ್ಮ ಆಡಳಿತ ವ್ಯವಹಾರ ಸಂಪೂರ್ಣ ಕನ್ನಡದಲ್ಲಿ ನಡೆಯುತ್ತದೆ .
ಕನ್ನಡ ಭಾಷೆ ಉಳಿಯಬೇಕಾದರೆ ಪ್ರತಿಯೊಬ್ಬರು ಕನ್ನಡ ಬಳಸಿ ,ಬೆಳಸಬೇಕು .ಕನ್ನಡ ಭಾಷೆ 2500ವರ್ಷಗಳ ಇತಿಹಾಸವಿದೆ .ನಮ್ಮ ಕನ್ನಡ ಭಾಷೆಗೆ 8ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಇದರಿಂದ ತಿಳಿಯುತ್ತದೆ ಕನ್ನಡ ಭಾಷೆ ಸರಳ ,ಸುಂದರ,ಸಂಸ್ಕೃತಿವುಳ್ಳ ಭಾಷೆ ಎಂದು .ಎಲ್ಲರು ಕನ್ನಡ ಬಳಸಿ ,ಬೆಳಸಿ ಎಂದು ಹೇಳಿದರು.
ವಿಶೇಷ ಆಯುಕ್ತರಾದ ದಯಾನಂದ್ ರವರು ಮಾತನಾಡಿ ಇತಿಹಾಸ ತಜ್ಞರು ನೀಡಿರುವ ವರದಿ ಕನ್ನಡ ಭಾಷೆ ಆಳಿವಿನ ಅಂಚಿನಲ್ಲಿದೆ ಎಂಬ ವರದಿ ಇದೆ .ಕನ್ನಡ ಭಾಷೆ ಉಳಿಸಲು ,ಬೆಳಸಲು ಪ್ರತಿಯೊಬ್ಬ ಅಂದೋಲನವಾಗಬೇಕು ಕನ್ನಡವೆ ನಮ್ಮ ಉಸಿರು ,ಕನ್ನಡ ಭಾಷೆ ಉಳಿಯಲು ಲಕ್ಷಾಂತರ ಜನರ ಕೊಡುಗೆ ಇದೆ.ಕನ್ನಡ ಭಾಷೆ ಉಳಿಯಲು ಪ್ರತಿನಿತ್ಯ ಆಡಳಿತವನ್ನು ವ್ಯವಹಾರವಾಗಬೇಕು .ಕರ್ನಾಟಕ ರಾಜ್ಯ ಗತವೈಭವದ ಇತಿಹಾಸವಿದೆ ಎಂದು ಹೇಳಿದರು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಾಡಪ್ರಭು ಕೆಂಪೇಗೌಡರ ಮತ್ತು ಓನಕೆ ಓಬವ್ವರವರ ಜೀವನ ಚರಿತ್ರೆ ನೃತ್ಯರೂಪಕ ಪ್ರದರ್ಶನ ಮತ್ತು ಮಳೆಯಿಂದ ರಕ್ಷಣೆ ಪಡೆಯಲು 1000ಕೊಡೆ(ಛತ್ರಿ)ವಿತರಿಸಲಾಯಿತು.