ಬೆಂಗಳೂರು:
ಚುನಾವಣಾ ಪ್ರಚಾರದ ಭರಾಟೆಯ ನಡುವೆಯೇ ಇಬ್ಬರೂ ನಾಯಕರು ಕುಳಿತು ಲೋಕಾಭಿರಾಮವಾಗಿ, ಆತ್ಮೀಯವಾಗಿ ಮತ್ತು ವೈಯಕ್ತಿಕ ವಿಚಾರಗಳನ್ನೂ ಮಾತನಾಡಿರುವ ವಿಡಿಯೊವೊಂದನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಹೊಸ ಮಾದರಿಯ ಸಂದರ್ಶನ ಇದಾಗಿದ್ದು, ಇಬ್ಬರೂ ನಾಯಕರು ಪರಸ್ಪರ ಮಾತನಾಡಿರುವುದು, ಪ್ರಶ್ನೆಗಳನ್ನು ಕೇಳುತ್ತಾ ಮನಬಿಚ್ಚಿ ಮಾತನಾಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಉಭಯ ಕುಶಲೋಪರಿ, ರಾಜ್ಯ ರಾಜಕೀಯದ ಆಗು-ಹೋಗುಗಳು, ಕಾಂಗ್ರೆಸ್ ಗ್ಯಾರಂಟಿಗಳ ಅನುಷ್ಠಾನ, ಜನರಿಗೆ ಕಾಂಗ್ರೆಸ್ ಮೇಲಿರುವ ನಂಬಿಕೆಯ ಕುರಿತಾಗಿ ಉಭಯ ನಾಯಕರ ಮಾತು ಮಂಥನ..
— Karnataka Congress (@INCKarnataka) May 7, 2023
ತಪ್ಪದೆ ವೀಕ್ಷಿಸಿ#ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ pic.twitter.com/OtoXT2GudX
ಪ್ರಚಾರದ ಭರಾಟೆಯ ಮಧ್ಯೆ ಶ್ರೀ ಸಿದ್ದರಾಮಯ್ಯ ಹಾಗೂ ಶ್ರೀ ಡಿಕೆ ಶಿವಕುಮಾರ್ ನಡುವೆ ನಡೆದ ವಿಚಾರ ವಿನಿಮಯದ ತುಣುಕು ಇಲ್ಲಿದೆ.
ರಾಜ್ಯದ ಆಗುಹೋಗುಗಳು, ಭವಿಷ್ಯದ ಯೋಜನೆಗಳ ಕುರಿತ ಚರ್ಚೆಯ ಸಂಪೂರ್ಣ ವಿಡಿಯೋ ಸದ್ಯದಲ್ಲಿಯೇ ಬರಲಿದೆ.