ಬೆಂಗಳೂರು: ಲೋಕಸಭೆ ಚುನಾವಣೆಯ ಅಖಾಟಕ್ಕೆ 6 ರಿಂದ 8 ಸಚಿವರ ಧುಮುಕೋದು ಖಚಿತವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರ್ಧಾರಕ್ಕೆ ಕೆಲ ಸಚಿವರು ಅಸಮಧಾನ ವ್ಯಕ್ತಪಡಿಸಿದ್ದಾರೆ. “ಸಚಿವರು ಸ್ಪರ್ಧೆ ಮಾಡಿದ್ರೆ ಮಾತ್ರ ಗೆಲುವು ಸಿಗಲಿದೆ,” ಎಂದು ಎಐಸಿಸಿಗೆ (AICC) ಕೆಪಿಸಿಸಿ (KPCC) ಸೀಕ್ರೆಟ್ ರಿಪೋರ್ಟ್ ಸಲ್ಲಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋದ್ರಿಂದ ಕನಿಷ್ಠ 20 ಸ್ಥಾನ ಗೆಲ್ಲಬೇಕೆಂದು ರಾಜ್ಯ ಕಾಂಗ್ರೆಸ್ ಗೆ ಎಐಸಿಸಿ ಸೂಚನೆ ನೀಡಿದೆ. 20 ಸ್ಥಾನ ಗೆಲ್ಲಬೇಕಾದರೆ 6 ರಿಂದ 8 ಸಚಿವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂದು ಚರ್ಚೆಗಳು ನಡೆದಿದ್ವು.
ಕೆ ಎಚ್ ಮುನಿಯಪ್ಪ, ಎಚ್ ಸಿ ಮಹಾದೇವಪ್ಪ, ಸತೀಶ್ ಜಾರಕಿಹೊಳಿ, ಕೃಷ್ಣಭೈರೇಗೌಡ, ಎಚ್ ಕೆ ಪಾಟೀಲ್ ಸೇರಿ ಪ್ರಮುಖ ಸಚಿವರು ಲೋಕಸಭೆ ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ. “ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಸೋತ್ರೆ ರಾಜಕೀಯದಿಂದ ಹಿಂದೆ ಸರಿಯಬೇಕಾಗುತ್ತೆ,” ಎಂದಿದ್ದಾರೆ.
“ನನ್ನ ಬದಲಿಗೆ ನನ್ನ ಕುಟುಂಬ ಸದಸ್ಯರಿಗೆ ಟಿಕೆಟ್ ಕೊಡಿ ಎಂದು ಕೆಲ ಸಚಿವರು ಒತ್ತಡ ಹಾಕುತ್ತಿದ್ದಾರೆ,” ಎಂದು ಮೂಲಗಳು ಹೇಳಿವೆ.
ಇದ್ರ ನಡುವೆ ಇದೀಗ ಸಚಿವರ ಸ್ಪರ್ಧೆ ಅನಿವಾರ್ಯ ಎಂದು ಎಐಸಿಸಿಗೆ ಕೆಪಿಸಿಸಿ ಸೀಕ್ರೆಟ್ ರಿಪೋರ್ಟ್ ಹೋಗಿದೆ. ಇದು ಕೆಲ ಸಚಿವರಿಗೆ ಆಂತಕ ತರಿಸಿದೆ.